ಬೆಳಗಾವಿ: ಪ್ರಸ್ತುತ ನಡೆಯುತ್ತಿರುವ ಧಾರ್ಮಿಕ ಸಂಘರ್ಷ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಮಾಜಿ ಸಂಸದ ರಮೇಶ್ ಕತ್ತಿ, ಹಿಂದೂ ಎಂಬುದು ಧರ್ಮವಲ್ಲ, ಅದೊಂದು ಜೀವನ ಶೈಲಿ ಎಂದು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕತ್ತಿ, ಸಧ್ಯ ಎಲ್ಲೆಡೆ ಹಿಂದೂ ಧರ್ಮದ ಬಗ್ಗೆಯೇ ಚರ್ಚೆಗಳು ನಡೆಯುತ್ತಿವೆ. ಸಿಂಧೂ ಪ್ರಾಂತ್ಯದವರನ್ನು ಹಿಂದೂಗಳು ಎಂದು ಕರೆದರು. ಅದೇ ಪದ ಚಾಲ್ತಿಯಲ್ಲಿದೆ ಅಷ್ಟೇ. ಹಿಂದೂ ಎಂಬುದು ಜೀವನ ಶೈಲಿ ಎಂದು ಹೇಳಿದರು.
ಈಗ ಯುರೋಪಿಯನ್, ಅಮೆರಿಕನ್ ಅಂತ ಕರೆಯುತ್ತೇವೆ. ಹಾಗೇ ಭಾರತದಲ್ಲಿ ವಾಸಿಸುವವರನ್ನು ಹಿಂದೂಗಳು ಎಂದು ಕರೆಯಲಾಗುತ್ತದೆ ಎಂದು ವಿವರಿಸಿದ್ದಾರೆ.