alex Certify ಊಟಕ್ಕಾಗಿ ಕಿತ್ತಾಡಿಕೊಂಡ ಶಾಲಾ ಶಿಕ್ಷಕರು…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊಟಕ್ಕಾಗಿ ಕಿತ್ತಾಡಿಕೊಂಡ ಶಾಲಾ ಶಿಕ್ಷಕರು…..!

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಮಕ್ಕಳು ಮುಗಿಬೀಳುವುದು ಸಾಮಾನ್ಯವಾಗಿದೆ. ಆದರೆ, ಶಿಕ್ಷಕರೇ ಊಟಕ್ಕೆ ನಾಮುಂದು ತಾಮುಂದು ಎಂದು ಮುಗಿ ಬಿದ್ದಿರುವುದನ್ನು ಊಹಿಸಲಸಾಧ್ಯ.

ಇಂತಹದ್ದೊಂದು ಘಟನೆಗೆ ಪಂಜಾಬ್ ಸಾಕ್ಷಿಯಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇತ್ತೀಚೆಗೆ ಶಾಲಾ ಶಿಕ್ಷಕರು ಮತ್ತು ಪ್ರಾಂಶುಪಾಲರ ಸಭೆ ನಡೆಸಿದರು. ಮಧ್ಯಾಹ್ನ ಸಭೆ ಮುಗಿದ ಬಳಿಕ ಶಿಕ್ಷಕರು ಮತ್ತು ಪ್ರಾಂಶುಪಾಲರು ಉಚಿತವಾಗಿ ಸಿಗುತ್ತಿದ್ದ ಊಟಕ್ಕಾಗಿ ಕಿತ್ತಾಡಿಕೊಂಡ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಊಟಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿರುವಂತೆ ಕಾಣುತ್ತಿದ್ದ ಶಿಕ್ಷಕರು ಊಟದ ಪ್ಲೇಟ್ ಪಡೆದುಕೊಳ್ಳಲು ಒಬ್ಬರನ್ನು ಒಬ್ಬರು ತಳ್ಳುತ್ತಾ ಹರಸಾಹಸ ಮಾಡಿದ್ದಾರೆ. ಶಿಕ್ಷಕರ ಈ ರಂಪಾಟವನ್ನು ಕಂಡ ಹೊಟೇಲ್ ಸಿಬ್ಬಂದಿಯೊಬ್ಬ ಪ್ಲೇಟ್ ಗಳನ್ನು ಮೂಲೆಯೊಂದರಲ್ಲಿ ಇಟ್ಟು ಎಲ್ಲರೂ ಸಾಲಾಗಿ ಬರುವಂತೆ ಸೂಚನೆ ನೀಡಿ ಅವರಿಗೆ ಶಿಸ್ತಿನ ಪಾಠ ಹೇಳಿಕೊಟ್ಟಿದ್ದಾನೆ.

ನಂತರ ಶಿಕ್ಷಕರು ಸಾಲಾಗಿ ಬಂದು ಪ್ಲೇಟ್ ಗಳನ್ನು ಪಡೆದು ಊಟ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗಳು, ಆಕ್ರೋಶಗಳು ವ್ಯಕ್ತವಾಗಿದ್ದು, ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಡಬೇಕಾದವರೇ ಹೀಗೆ ಮಾಡಿದರೆ ಹೇಗೆ? ಎಂಬ ಪ್ರಶ್ನೆಗಳು ಕೇಳಿಬಂದಿವೆ.

ಅಲ್ಲದೇ, ಅಶಿಸ್ತಿನ ಪರಮಾವಧಿಯನ್ನು ಹೊಂದಿರುವ ಈ ಶಿಕ್ಷಕರಿಗೆ ಮೊದಲು ಸಾಮಾನ್ಯ ಜ್ಞಾನ ಮತ್ತು ಶಿಸ್ತಿನ ಪಾಠ ಹೇಳಿಕೊಡಬೇಕು ಎಂದು ನೆಟ್ಟಿಗರು ಝಾಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...