ರಾಯಚೂರು: ಪಿಯು ಉಪನ್ಯಾಸಕರೊಬ್ಬರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಘಟನೆ ರಾಯಚೂರು ಜಿಲ್ಲೆ ದೇವದುರ್ಗದಲ್ಲಿ ನಡೆದಿದೆ.
59 ವರ್ಷದ ಮಾನಪ್ಪ ಗೋಪಳಾಪುರ ಹತ್ಯೆಯಾದ ಉಪನ್ಯಾಸಕ. ಮಾನಪ್ಪ ದೇವದುರ್ಗದ ಪಿಯು ಮಹಿಳಾ ಕಾಲೇಜು ಉಪನ್ಯಾಸಕರಾಗಿದ್ದರು. ಪರೀಕ್ಷಾ ಡ್ಯೂಟಿ ಮುಗಿಸಿ ಸುರುಪುರ ತಾಲೂಕಿನ ಐನಾಳಕ್ಕೆ ತೆರಳುತ್ತಿದ್ದ ವೇಳೆ ಮಾರ್ಗಮಧ್ಯೆ ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಹಲ್ಲೆ ನಡೆಸಿದ್ದು, ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದೆ.
ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.