ಅಮೆರಿಕಾದ ಫ್ಲೋರಿಡಾದಲ್ಲಿ ಮಾನವೀಯತೆಯ ವಿಡಿಯೋವೊಂದು ಹೊರಬಿದ್ದಿದೆ. ಕಾರು ಚಲಾಯಿಸುತ್ತಿರಬೇಕಾದ್ರೆ ಮಹಿಳೆಯೊಬ್ಬಳು ಅಸ್ವಸ್ಥಳಾಗಿದ್ದು, ಆಕೆಯ ಸಹಾಯಕ್ಕೆ ಒಂದು ಗುಂಪು ಧಾವಿಸಿದೆ.
ಘಟನೆಯ ವಿಡಿಯೋವನ್ನು ತಮ್ಮ ಫೇಸ್‌ಬುಕ್ ಪುಟದಲ್ಲಿ ಬಾಯ್ಂಟನ್ ಬೀಚ್ ಪೊಲೀಸ್ ಇಲಾಖೆ ಹಂಚಿಕೊಂಡಿದೆ. ಫ್ಲೋರಿಡಾದ ಬಾಯ್ಂಟನ್ ನಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ವಾಹನ ಚಾಲಕರು ಟ್ರಾಫಿಕ್ ಲೈಟ್ ಹಸಿರು ಬಣ್ಣಕ್ಕೆ ತಿರುಗುವುದನ್ನೇ ಕಾಯುತ್ತಿದ್ದರು. ಆದರೆ, ಈ ವೇಳೆ ಕಾರೊಂದು ಇದ್ದಕ್ಕಿದ್ದಂತೆ ಚಲಿಸಿದೆ.
ಕಾರು ಸಮೀಪಿಸುತ್ತಿದ್ದಂತೆ, ಮಹಿಳೆಯೊಬ್ಬರು ಸ್ಟೇರಿಂಗ್ ಮೇಲೆ ಚಾಲಕಿ ಬಿದ್ದಿರುವುದನ್ನು ಗಮನಿಸಿದ್ದಾರೆ. ಆಕೆಗೆ ವೈದ್ಯಕೀಯ ತುರ್ತುಸ್ಥಿತಿ ಇದೆ ಎಂದು ಅರಿತುಕೊಂಡ ಅವರು ಕಾರಿನ ಕಡೆಗೆ ದೌಡಾಯಿಸಿದ್ದಾರೆ. ಆಕೆಗೆ ಸಹಾಯ ಮಾಡುವ ಪ್ರಯತ್ನದಲ್ಲಿ ಕಿಟಕಿಯ ಮೇಲೆ ಬಡಿಯಲು ಪ್ರಾರಂಭಿಸಿದ್ರು.
ವಾಹನವನ್ನು ತನ್ನಿಂದ ನಿಲ್ಲಿಸಲು ಸಾಧ್ಯವಾಗದ ಕಾರಣ ಸಹಾಯಕ್ಕಾಗಿ ಇತರರನ್ನು ಕೂಗಿದ್ದಾಳೆ. ಕೂಡಲೇ ಹಲವಾರು ವಾಹನ ಸವಾರರು ಕಾರ್ಯಪ್ರವೃತ್ತರಾಗಿ ಕಾರಿನತ್ತ ದೌಡಾಯಿಸಿದ್ದಾರೆ. ಎಲ್ಲರೂ ಸೇರಿ ಕಾರನ್ನು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೋ ಹೀಗೋ ಮಾಡಿ ಚಾಲಕಿ ಕೂತಿದ್ದ ಬಾಗಿಲು ತೆಗೆಯುವಲ್ಲಿ ಅಲ್ಲಿದ್ದವರು ಯಶಸ್ವಿಯಾಗಿದ್ದಾರೆ. ನಂತರ ಕಾರನ್ನು ಪಾರ್ಕಿಂಗ್ ಸ್ಥಳಕ್ಕೆ ತಳ್ಳಿದ್ದು, ಕೂಡಲೇ ಮಹಿಳೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಇದೇ ಅಲ್ಲವೇ ನಿಜವಾದ ಮಾನವೀಯತೆ ಅಂದ್ರೆ..?