ಸಿಎಂ ಭೇಟಿ ನಂತರ ಊಟಕ್ಕೆ ಕಿತ್ತಾಡಿದ ಶಿಕ್ಷಕರು….! ವಿಡಿಯೋ ವೈರಲ್ 13-05-2022 6:02AM IST / No Comments / Posted In: Latest News, India, Live News ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಜೊತೆ ಸಭೆಯಲ್ಲಿ ಪಾಲ್ಗೊಂಡ ನಂತರ ನಂತರ ಸರ್ಕಾರಿ ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರು ಉಚಿತ ಊಟಕ್ಕಾಗಿ ಮುಗಿಬಿದ್ದಿರುವ ವಿಡಿಯೋ ವೈರಲ್ ಆಗಿದೆ. ಪಂಜಾಬ್‌ನ ರೆಸಾರ್ಟ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು ವ್ಯಾಪಕ ವೈರಲ್ ಆಗಿದೆ. ಹಲವಾರು ಶಾಲೆಗಳ ಶಿಕ್ಷಕರು, ಪ್ರಾಂಶುಪಾಲರು ಮೇಜಿನ ಸುತ್ತ ನೆರೆದಿದ್ದು, ನಾಮುಂದು ತಾಮುಂದು ಅಂತಾ ಮುಗಿಬಿದ್ದಿದ್ದಾರೆ. ಆರಂಭದಲ್ಲಿ, ಸಭೆಯಲ್ಲಿ ಸಿಬ್ಬಂದಿ ಸದಸ್ಯರಾಗಿ ಕಂಡುಬರುವ ವ್ಯಕ್ತಿಯೊಬ್ಬರು ಕ್ರಮಬದ್ಧವಾಗಿ ಪ್ಲೇಟ್‌ಗಳನ್ನು ವಿತರಿಸಲು ಪ್ರಯತ್ನಿಸಿದ್ರು. ಆದರೆ, ತಾಳ್ಮೆ ಕಳೆದುಕೊಂಡ ಶಾಲಾ ಸಿಬ್ಬಂದಿ ಪ್ಲೇಟ್ ಗೆ ಕಿತ್ತಾಡಲು ಶುರು ಮಾಡಿದ್ದಾರೆ. ಸ್ಥಳದಲ್ಲಿ ಪರಸ್ಪರ ನೂಕುನುಗ್ಗಲು ಉಂಟಾಗಿ, ಎಲ್ಲರೂ ತಟ್ಟೆಗಳನ್ನು ಕಸಿದುಕೊಂಡಿದ್ದರಿಂದ ಸಂಪೂರ್ಣ ಅವ್ಯವಸ್ಥೆಗೆ ತಿರುಗಿದವು. ಒಬ್ಬ ವ್ಯಕ್ತಿ ಪ್ಲೇಟ್ ಅನ್ನು ಪಡೆಯುವ ಪ್ರಯತ್ನದಲ್ಲಿ ಇಡೀ ಪ್ಲೇಟ್‌ಗಳ ರಾಶಿಯನ್ನು ತನ್ನ ಕಡೆಗೆ ಎಳೆದಿದ್ದಾನೆ. ವರದಿಯ ಪ್ರಕಾರ, ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು, ಸಲಹೆಗಳನ್ನು ಪಡೆಯಲು ಸರ್ಕಾರಿ ಶಾಲೆಗಳು ಮತ್ತು ಪ್ರಾಂಶುಪಾಲರೊಂದಿಗೆ ಸಭೆ ನಡೆಸಿದ್ರು. ಹೀಗಾಗಿ ಮಧ್ಯಾಹ್ನದ ಊಟವನ್ನೂ ಕೂಡ ಆಯೋಜಿಸಲಾಗಿತ್ತು. ಆದರೆ, ಶಿಕ್ಷಕರು ಈ ರೀತಿ ಊಟಕ್ಕೆ ಕಿತ್ತಾಡಿದ್ದಾರೆ. ಈ ವಿಡಿಯೋವನ್ನು 5 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದು, ಶಿಕ್ಷಕರ ಅಶಿಸ್ತಿನ ವರ್ತನೆಗೆ ಬಳಕೆದಾರರು ಛೀಮಾರಿ ಹಾಕಿದ್ದಾರೆ. ಇವರೇನಾ ನಿಜವಾದ ಶಿಕ್ಷಕರು ಅಂತಾ ಪ್ರಶ್ನಿಸಿದ್ದಾರೆ. Lunch Scenes of Principals & Teachers after meeting with CM & Education Minister in Ludhiana pic.twitter.com/utJEesjGRP — Gagandeep Singh (@Gagan4344) May 10, 2022