ಪಂಚಮಹಲ್: ಜೂಜಾಟದ ಪ್ರಕರಣ ಸಂಬಂಧ ಹಾಲಿ ಬಿಜೆಪಿ ಶಾಸಕ ಮತ್ತು ಇತರ 25 ಮಂದಿಗೆ ಗುಜರಾತ್ನ ಪಂಚಮಹಲ್ ಜಿಲ್ಲೆಯ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮತರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೇಸರಿಸಿಂಹ ಸೋಲಂಕಿ ಸೇರಿ ಇತರರಿಗೆ 3 ಸಾವಿರ ದಂಡ ವಿಧಿಸಿರುವ ನ್ಯಾಯಾಲಯ ಜೂಜಾಟ ವೇಳೆ ಆರೋಪಿಗಳು ಸಿಕ್ಕಿಬಿದ್ದಿರುವ ರೆಸಾರ್ಟ್ನ ಪರವಾನಗಿ ರದ್ದುಪಡಿಸಲು ಆದೇಶಿಸಿದೆ.
ತೀರ್ಪಿನ ವೇಳೆ ಕುರಾನ್ ಮತ್ತು ಭಗವದ್ಗೀತೆ ಶ್ಲೋಕಗಳನ್ನು ಉಲ್ಲೇಖಿಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರೇಮ್ ಹಂಸರಾಜ್ ಸಿಂಗ್, ಎರಡೂ ಧಾರ್ಮಿಕ ಪುಸ್ತಕಗಳಲ್ಲಿ ಜೂಜಾಟವನ್ನು ನಿಷೇಧಿಸಲಾಗಿದೆ. ಪ್ರಸ್ತುತ ಸಮಾಜ ಸೇವೆಯಲ್ಲಿ ತೊಡಗಿರುವ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸಮಾಜ ಸುವ್ಯವಸ್ಥೆ ಕಾಪಾಡಬೇಕಾದವರೆ ಜೂಜಾಟದಲ್ಲಿ ತೊಡಗುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.
BIG NEWS: ನನ್ನನ್ನು ಟ್ರೋಲ್ ಮಾಡುವ ತೊಂದರೆ ತೆಗೆದುಕೊಳ್ಳಬೇಡಿ; ನಾನೇ ಟ್ರೋಲ್ ಮಾಡಿಕೊಳ್ಳುತ್ತೇನೆ ಎಂದು ಟಾಂಗ್ ನೀಡಿದ ರಮ್ಯಾ
ರೆಸಾರ್ಟ್ ನಿಂದ ಸಿಸಿಟಿವಿ ವಶಪಡಿಸಿಕೊಂಡು ಪರಿಶೀಲನೆ ನಡೆಸಿದಾಗ ಬಿಜೆಪಿ ಶಾಸಕ ಮತ್ತು ಇತರ 25 ಮಂದಿ ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಗಿದೆ.
ಇನ್ನು ಆರೋಪಿಗಳಿಂದ 3.89 ಲಕ್ಷ ನಗದು, 25 ಮೊಬೈಲ್ ಫೋನ್ ಗಳು, ಒಂದು ಲ್ಯಾಪ್ ಟಾಪ್, ಟೋಕನ್ ಕರೆನ್ಸಿಯಾಗಿ ಬಳಸಿದ ಪ್ಲಾಸ್ಟಿಕ್ ನಾಣ್ಯಗಳು, ಪ್ಲೇ ಕಾರ್ಡ್ ಮತ್ತು ಎಂಟು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ನ್ಯಾಯಾಲಯ 96 ಸಾಕ್ಷಿಗಳನ್ನು ವಿಚಾರಣೆಗೊಳಪಡಿಸಲಾಗಿದ್ದು, ರೆಸಾರ್ಟ್ನಲ್ಲಿರುವ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ 13 ಡಾಕ್ಯುಮೆಂಟರಿ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.