ಫ್ಲೋರಿಡಾ: ವಿಮಾನ ಪ್ರಯಾಣಿಕನೊಬ್ಬ ಏರ್ ಟ್ರಾಫಿಕ್ ಕಂಟ್ರೋಲರ್ ಸಹಾಯದಿಂದ ವಿಮಾನವನ್ನು ಸಿನಿಮೀಯ ರೀತಿಯಲ್ಲಿ ಯಶಸ್ವಿಯಾಗಿ ಇಳಿಸಿದ ಘಟನೆ ಫ್ಲೋರಿಡಾದಲ್ಲಿ ನಡೆದಿದೆ.
ವಿಮಾನ ಹಾರಾಟದ ವೇಳೆ ಪೈಲಟ್ ಆರೋಗ್ಯದಲ್ಲಿ ಏರುಪೇರಾಗಿದೆ. ಆಗ ಪ್ರಯಾಣಿಕನಿಗೆ ಅಪಾಯದ ಸ್ಥಿತಿಯಲ್ಲಿ ಇರುವುದು ಅರಿವಿಗೆ ಬಂತು. ಆದರೆ ಆತನಿಗೆ ವಿಮಾನ ಹಾರಾಟದ ಬಗ್ಗೆ ಏನು ತಿಳಿದಿರಲಿಲ್ಲ. ತಕ್ಷಣವೇ ಆತ ನನಗೆ ವಿಮಾನ ಹಾರಾಟದ ಬಗ್ಗೆ ತಿಳಿದಿಲ್ಲ ಎಂಬ ಸಂದೇಶ ವಿಮಾನ ಟವರ್ ಮೂಲಕ ಏರ್ ಟ್ರಾಫಿಕ್ ಕಂಟ್ರೋಲರ್ ಗೆ ತಲುಪಿಸಿದ್ದಾನೆ.
ಟ್ರಾಫಿಕ್ ಕಂಟ್ರೋಲರ್ ಮೋರ್ಗನ್ ಅವರು ಪ್ರಯಾಣಿಕನಿಗೆ ನಿನ್ನ ಮುಂದೆ ಏನು ಕಾಣುತ್ತಿದೆ ಎಂದು ಕೇಳಿದ್ದಾರೆ. ಕರಾವಳಿ ಫ್ಲೋರಿಡಾ ಹೊರತಾಗಿ ಏನು ಕಾಣುತ್ತಿಲ್ಲ ಎಂದಿದ್ದಾನೆ ಆತ. ವಿಮಾನವನ್ನು ಹೇಗೆ ನಿಲ್ಲಿಸಬೇಕೆಂದು ನನಗೆ ತಿಳಿದಿಲ್ಲ. ನನಗೆ ಏನನ್ನೂ ಹೇಗೆ ಮಾಡಬೇಕೆಂದು ತಿಳಿದಿಲ್ಲ ಎಂದು ತಿಳಿಸಿದ್ದಾನೆ.
ಆಗ ಏರ್ ಕಂಟ್ರೋಲರ್, ವಿಮಾನದ ರೆಕ್ಕೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ವಿಮಾನ ಎಲ್ಲಿದೆ ಎಂದು ಪತ್ತೆ ಹಚ್ಚುತ್ತಿದ್ದೇವೆ ಎಂದು ಹೇಳಿ ನಂತರ ಮಾರ್ಗದರ್ಶನ ಮಾಡಿದ್ದಾರೆ. ಬಳಿಕ ಫ್ಲೋರಿಡಾದ ಪಾಮ್ ಬೀಚ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನವನ್ನು ಯಶಸ್ವಿಯಾಗಿ ಇಳಿಸಲು ಸಹಾಯ ಮಾಡಿದ್ದಾರೆ.