ಪುದುಚೇರಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಟ್ರೋಲ್ಗೆ ಒಳಗಾಗಿ ಸುದ್ದಿಯಾಗಿದ್ದಾರೆ.
ಸಮುದ್ರದ ಮಧ್ಯದಿಂದ ಹಾರಿ ಬರುವ ಹೆಲಿಕಾಪ್ಟರ್ ಮೇಲೆ ಬೃಹತ್ ಶಾರ್ಕ್ ದಾಳಿ ಮಾಡುವ ವಿಡಿಯೋವನ್ನು ಬೇಡಿ ಹಂಚಿಕೊಂಡಿದ್ದರು. ವಿಡಿಯೊ ಜೊತೆಗೆ ಬರೆದ ಸಂದೇಶಕ್ಕಾಗಿ ಅವರನ್ನು ನೆಟ್ಟಿಗರು ಹಿಗ್ಗಾಮುಗ್ಗ ಟ್ರೋಲ್ ಮಾಡಿದ್ದಾರೆ.
BIG NEWS: ಮೋದಿ ಪ್ರಧಾನಿಯಾಗಿ 8 ವರ್ಷ, ಬಿಜೆಪಿಯಿಂದ ದೇಶವ್ಯಾಪಿ ಅಭಿಯಾನ
ಈ ಅಪರೂಪದ ವಿಡಿಯೊಗಾಗಿ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ 1 ಮಿಲಿಯನ್ ಡಾಲರ್ ಪಾವತಿಸಿದೆ. ವಾಟ್ ಎ ವಿಡಿಯೋ ಎಂದು ವಿಡಿಯೋದಲ್ಲಿ ಬರೆದಿರುವುದನ್ನು ಕಾಣಬಹುದಾಗಿದೆ.
ಕೆಲವರು ವ್ಯಂಗ್ಯವಾಗಿ ಟೀಕಿಸಿದರೆ, ಮತ್ತೆ ಕೆಲವರು ಇದನ್ನು ಹಂಚಿಕೊಳ್ಳುವ ಮೊದಲು ವಿಡಿಯೊದ ಮೂಲವನ್ನು ಹೇಗೆ ಪರಿಶೀಲಿಸಬೇಕು ಎಂದು ಸಲಹೆ ನೀಡಿದ್ದಾರೆ. ಕಿರಣ್ ಬೇಡಿ ಹಂಚಿಕೊಂಡ ಕ್ಲಿಪ್ ವಾಸ್ತವವಾಗಿ 2017ರ ಚಲನಚಿತ್ರ 5 ಹೆಡೆಡ್ ಶಾರ್ಕ್ ಅಟ್ಯಾಕ್ನ ದೃಶ್ಯವಾಗಿತ್ತು.