ಇದೊಂದು ವಿಚಿತ್ರವಾದ ಪ್ರಕರಣ. ವೃದ್ಧ ದಂಪತಿಗಳಿಗೆ ಮೊಮ್ಮಕ್ಕಳ ಮುಖ ನೋಡಬೇಕು, ಅವರ ಜೊತೆ ಆಟ ಆಡಬೇಕು ಅನ್ನೋ ಆಸೆ. ಆದರೆ ಮಗ – ಸೊಸೆ ಮದುವೆ ಆಗಿ 6 ವರ್ಷವಾದರೂ ಮಕ್ಕಳ ಬಗ್ಗೆ ವಿಚಾರವೇ ಮಾಡಿಲ್ಲ. ಇದೇ ಕಾರಣಕ್ಕೆ ಈ ವೃದ್ಧ ದಂಪತಿಗಳು ಈಗ ಮಗ-ಸೊಸೆಯ ವಿರುದ್ಧ ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಅಷ್ಟೆ ಅಲ್ಲ ಒಂದು ವರ್ಷದೊಳಗೆ ಮಗ-ಸೊಸೆ ಮೊಮ್ಮಗುವನ್ನ ಕೊಡದೇ ಹೋದರೆ 5 ಕೋಟಿ ರೂಪಾಯಿ ಪರಿಹಾರ ನೀಡಿ ಅಂತ ಕೇಸ್ ದಾಖಲಿಸಿದ್ದಾರೆ.
ಈ ಪ್ರಕರಣ ನಡೆದಿರೋದು ಹರಿದ್ವಾರದಲ್ಲಿ. ಎಸ್.ಆರ್. ಪ್ರಸಾದ್ ಮತ್ತು ಅವರ ಪತ್ನಿ ಈಗ ಮೊಮ್ಮಗುವಿನ ಮುಖ ನೋಡುವ ಆಸೆಯಿಂದ ಮಗ – ಸೊಸೆಯ ವಿರುದ್ಧವೇ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅವರಿಗೆ ಮೊಮ್ಮಗ ಆದರೂ ಪರವಾಗಿಲ್ಲ, ಮೊಮ್ಮಗಳಾದರೂ ಪರವಾಗಿಲ್ಲ, ಒಟ್ಟಿನಲ್ಲಿ ಮೊಮ್ಮಗು ಇದ್ದರೆ ಸಾಕು ಅಂತ ಹೇಳುತ್ತಿದ್ದಾರೆ.
ʼಹದಿಹರೆಯʼದ ಹುಡುಗಿಯರಲ್ಲಿ ಕಾಣಿಸಿಕೊಳ್ಳುತ್ತೆ ಈ ಬದಲಾವಣೆ
ಮಗನ ಶಿಕ್ಷಣ , ಆತನನ್ನ ಅಮೆರಿಕಾ ಕಳುಹಿಸುವ ಸಲುವಾಗಿ ಇದ್ದ ಹಣವನ್ನೆಲ್ಲ ಖರ್ಚು ಮಾಡಿದ್ದೇನೆ. ಹಾಗೆಯೇ ಸ್ವಂತ ಮನೆಗಾಗಿ ಸಾಲ ಮಾಡಿದ್ದೇನೆ. ಈಗ ನಾನು ಆರ್ಥಿಕ ಸಮಸ್ಯೆಯನ್ನ ಎದುರಿಸ್ತಾ ಇದ್ದೇನೆ. ಮಗನಿಗೆ ಎಷ್ಟು ಹೇಳಿದರೂ ಇತ್ತ ಗಮನ ಹರಿಸುತ್ತಿಲ್ಲ. ತಾನು ಇಷ್ಟೆಲ್ಲ ಸಮಸ್ಯೆ ಎದುರಿಸುತ್ತಿದ್ದರೂ ಮಗನಿಗೆ ತಮ್ಮ ಕಾಳಜಿಯೇ ಇಲ್ಲ. ಆದ್ದರಿಂದ ನಾನು ಮತ್ತು ನನ್ನ ಹೆಂಡತಿ ಇಬ್ಬರು ಮಗ – ಸೊಸೆಯ ವಿರುದ್ಧವೇ ಕೇಸ್ ಹಾಕುವಂತಹ ಪರಿಸ್ಥಿತಿ ಎದುರಾಗಿದೆ. ಎಂದು ಎಸ್.ಆರ್. ಪ್ರಸಾದ್ ಹೇಳಿದ್ದಾರೆ.
ಹೆತ್ತವರು ಮಕ್ಕಳ ಭವಿಷ್ಯ ಉತ್ತಮವಾಗಿರಲೆಂದು ಸಾಲ ಮಾಡಿ ಉತ್ತಮ ವಿದ್ಯಾಭ್ಯಾಸ ಕೊಡಿಸುತ್ತಾರೆ. ಆದರೆ ಮಕ್ಕಳು ವಯಸ್ಸಾದ ತಂದೆ-ತಾಯಿಯನ್ನೇ ನಿರ್ಲಕ್ಷ್ಯ ಮಾಡಿ ಬಿಡುತ್ತಾರೆ. ಈ ಸಮಸ್ಯೆ ಇವರಿಬ್ಬರದ್ದು ಮಾತ್ರ ಅಲ್ಲ. ಅನೇಕ ಮನೆಯಲ್ಲಿರೋ ಸಮಸ್ಯೆ ಇದು. ಈ ಒಂದು ಪ್ರಕರಣ ಅನೇಕ ಮನೆಯ ಸಮಸ್ಯೆಗೆ ಪರಿಹಾರವಾಗಲಿದೆ ಅಂತ ದೂರು ದಾಖಲಿಸಿರೋ ಪರ ವಾದ ಮಾಡುತ್ತಿರೋ ವಕೀಲ ಎ.ಕೆ. ಶ್ರಿವಾಸ್ತವ ಹೇಳಿದ್ದಾರೆ.