ಮದುವೆಗೆ ಬಂದ ಅತಿಥಿಗಳು ಎಸಿ ಇಲ್ಲದಿದ್ರೂ ತಂಪಾದ ಹವೆಯಿಂದ ಸ್ವಾಗತ ಪಡೆದಿದ್ಹೇಗೆ ಗೊತ್ತಾ..? ವೈರಲ್ ವಿಡಿಯೋ ನೋಡಿದ್ರೆ ವಿಸ್ಮಯಗೊಳ್ಳುತ್ತೀರಾ..! 12-05-2022 10:39AM IST / No Comments / Posted In: India, Featured News, Live News ನೀವು ಇಂಟರ್ನೆಟ್‌ನಲ್ಲಿ ಮದುವೆಗೆ ಸಂಬಂಧ ಅನೇಕ ವಿಡಿಯೋಗಳನ್ನು ನೋಡಿದ್ದರೆ, ಇದೀಗ ವೈರಲ್ ಆಗಿರೋ ವಿಡಿಯೋ ನಿಮ್ಮನ್ನು ಚಕಿತಗೊಳಿಸುತ್ತದೆ. ಐಪಿಎಸ್ ಅಧಿಕಾರಿ ಅವನೀಶ್ ಶರಣ್ ಅವರು ಹಂಚಿಕೊಂಡಿರುವ ಈ ಈ ವಿಡಿಯೋ ಖಂಡಿತಾ ನಿಮ್ಮನ್ನು ವಿಸ್ಮಯಗೊಳಿಸಲಿದೆ. ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋವು ಮದುವೆಯ ಮೆರವಣಿಗೆಯಲ್ಲಿ ಜನರಿಗೆ ಹವಾನಿಯಂತ್ರಣ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸಲು ಥ್ರೆಶರ್ ಯಂತ್ರವನ್ನು ಬಳಸುವುದನ್ನು ತೋರಿಸಲಾಗಿದೆ. ವಿಡಿಯೋದಲ್ಲಿ, ಮದುವೆಯ ಮೆರವಣಿಗೆ ಮೂಲಕ ಬಂದ ಅತಿಥಿಗಳನ್ನು ಸ್ವಾಗತಿಸಲು ಸ್ಥಾಪಿಸಲಾದ ಟೆಂಟ್‌ನ ಮುಂದೆ ಥ್ರೆಶರ್ ಯಂತ್ರವನ್ನು ನಿಲ್ಲಿಸಲಾಗಿದೆ. ಥ್ರೆಷರ್ ಯಂತ್ರವು ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಇದು ಹೊಟ್ಟು ಅಥವಾ ಒಣಹುಲ್ಲಿನಿಂದ ಧಾನ್ಯಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದನ್ನು ಸಾಮಾನ್ಯವಾಗಿ ಗೋಧಿಯನ್ನು ಪ್ರತ್ಯೇಕಿಸಲು ಬಳಸಲಾಗುತ್ತದೆ. ಅದ್ಭುತವಾದ ಈ ಪರಿಕಲ್ಪನೆ ನಿಜಕ್ಕೂ ಜನರನ್ನು ವಿಸ್ಮಯಗೊಳಿಸಿದೆ. ಯಂತ್ರವನ್ನು ಜಲಮೂಲದ ಮೇಲೆ ನಿಲ್ಲಿಸಲಾಗಿತ್ತು. ಇದು ಬಿಸಿಲಿನ ಶಾಖಕ್ಕೆ ಬಳಲಿದ ದಿಬ್ಬಣಕ್ಕೆ ತಂಪಾದ ಗಾಳಿಯನ್ನು ಹರಡಲು ಸಹಾಯ ಮಾಡಿದೆ. ಥ್ರೆಷರ್ ಗಾಳಿಯೊಂದಿಗೆ ಮೆರವಣಿಗೆಯನ್ನು ಸ್ವಾಗತಿಸುವುದು ಅದ್ಭುತ ಕಲ್ಪನೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಹಲವಾರು ವೀಕ್ಷಣೆಗಳು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳೊಂದಿಗೆ ವೈರಲ್ ಆಗಿದೆ. ಮದುವೆ ಮೆರವಣಿಗೆಯಲ್ಲಿ ತಂಪು ಹವೆ ಹಾಕಲು ಥ್ರೆಶರ್ ಯಂತ್ರವನ್ನು ಬಳಸಿ ಜನರನ್ನು ರಂಜಿಸಲಾಗಿದೆ. “थ्रेशर” की हवा से बारातियों का स्वागत. ग़ज़ब का आइडिया. pic.twitter.com/ewV1XeVZqG — Awanish Sharan 🇮🇳 (@AwanishSharan) May 10, 2022