ಕಾರೊಂದು ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಆತನನ್ನು ಕೆಳಗೆ ಬೀಳಿಸಿದೆ. ಸಿಟ್ಟಿಗೆದ್ದ ಬೈಕ್ ಸವಾರ ಏನು ಮಾಡಬಹುದು ಹೇಳಿ..? ಖಂಡಿತಾ ಜಗಳವಾಡಬಹುದು ಅಥವಾ ಪೊಲೀಸ್ ಕಂಪ್ಲೇಂಟ್ ಮಾಡಬಹುದು. ಆದರೆ, ಇಲ್ಲಾಗಿದ್ದೇ ಬೇರೆ.
ಹೌದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ನಿಮಗೆ ಅಚ್ಚರಿ ತರಿಸಬಹುದು. ಬೈಕ್ ಸವಾರನಿಗೆ ಅಜಾಗರೂಕತೆಯಿಂದ ಕಾರು ಡಿಕ್ಕಿ ಹೊಡೆದು ಅವರನ್ನು ಕೆಳಕ್ಕೆ ಬೀಳಿಸುವ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಕೆಲವು ಸೆಕೆಂಡುಗಳ ನಂತರ, ಆತ ಎದ್ದು ತನ್ನನ್ನು ಡಿಕ್ಕಿ ಹೊಡೆದ ಕಾರಿನ ಕಡೆಗೆ ವೇಗವಾಗಿ ದಾಪುಗಾಲು ಹಾಕುತ್ತಾನೆ.
ತನಗೆ ಡಿಕ್ಕಿ ಹೊಡೆದ ಕಾರು ಚಾಲಕ ಯುವತಿಯಾಗಿದ್ದಳು. ಆಕೆಗೆ ಡಿಕ್ಕಿ ಹೊಡೆದ ಬೈಕ್ ಸವಾರ ಹೇಗೆ ಪ್ರತಿಕ್ರಿಯಿಸುತ್ತಾನೋ ಎಂಬ ಭಯ ಕಾಡುತ್ತಿದೆ. ಭೀತಿಯಿಂದ ಕಂಗೆಟ್ಟಿದ್ದ ಯುವತಿಗೆ ಬೈಕ್ ಸವಾರನೇ ಸಾಂತ್ವನ ನೀಡಿದ್ದಾನೆ.
ಇನ್ಸ್ಟಾಗ್ರಾಮ್ ಖಾತೆಯ ಗುಡ್ನ್ಯೂಸ್ ಮೂವ್ಮೆಂಟ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವ್ಯಕ್ತಿ ತನ್ನ ಬೈಕ್ ರೈಡ್ ಮಾಡುವಾಗ ಕಾರು ಡಿಕ್ಕಿ ಹೊಡೆದಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ತಾನು ಕಂಡ ಅತ್ಯಂತ ನಂಬಲಾಗದ ಘಟನೆಯಲ್ಲಿ ಭಯದಿಂದ ಶೇಕ್ ಆಗುತ್ತಿದ್ದ ಯುವತಿಯನ್ನು ಸಾಂತ್ವನಗೊಳಿಸಿದ್ದು ನಿಜಕ್ಕೂ ಅಚ್ಚರಿ ತರಿಸಿದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ನೆಟ್ಟಿಗರು ಕೂಡ ಬೈಕ್ ಸವಾರ ವರ್ತಿಸಿದ ರೀತಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.