ಬೆವರಿನ ವಾಸನೆ ಹೋಗಲಾಡಿಸಿ ಸುವಾಸನೆ ಹೆಚ್ಚಿಸಲು ಮಾತ್ರ ಟಾಲ್ಕಮ್ ಪೌಡರ್ ಬಳಸುವುದಿಲ್ಲ. ಮೇಕಪ್ ಸೆಟ್ ಮಾಡಲು ಟಾಲ್ಕಮ್ ಪೌಡರ್ ಬಳಸಲಾಗುತ್ತದೆ.
ಹುಬ್ಬುಗಳು ಹಾಗೂ ಕಣ್ಣು ರೆಪ್ಪೆಗಳಿಗೆ ಮೇಕಪ್ ಮಾಡುವ ಮೊದಲು ಟಾಲ್ಕಮ್ ಪೌಡರ್ ಬಳಸಬೇಕು. ಮಸ್ಕಾರ ಹಚ್ಚುವ ಮೊದಲು ಸ್ವಲ್ಪ ಟಾಲ್ಕಮ್ ಪೌಡರ್ ಹಚ್ಚಿಕೊಳ್ಳುವಂತೆ ತಜ್ಞರು ಸಲಹೆ ನೀಡ್ತಾರೆ. ಟಾಲ್ಕಮ್ ಪೌಡರ್ ಹಚ್ಚುವ ಮೊದಲು ಕಣ್ಣನ್ನು ಮುಚ್ಚಿಕೊಳ್ಳಿ. ಇಲ್ಲವಾದ್ರೆ ಕಣ್ಣು ಉರಿ, ಕಣ್ಣು ಕೆಂಪಾಗಬಹುದು.
ಮೇಕಪ್ ಬೇಸ್ ರೂಪದಲ್ಲಿ ಟಾಲ್ಕಮ್ ಪೌಡರ್ ಬಳಸಬಹುದು. ಎಣ್ಣೆಯುಕ್ತ ಮುಖವನ್ನು ತಡೆಯಲು ಮೇಕಪ್ ಗಿಂತ ಮೊದಲು ಟಾಲ್ಕಮ್ ಪೌಡರ್ ಹಚ್ಚುವುದು ಒಳ್ಳೆಯದು.
ವ್ಯಾಕ್ಸಿಂಗ್ ನಂತ್ರ ತುರಿಕೆ, ಚರ್ಮ ಕೆಂಪಾಗುವುದು ಮಾಮೂಲಿ. ಇಂಥ ಸಮಸ್ಯೆಯಿರುವವರು ವ್ಯಾಕ್ಸಿಂಗ್ ನಂತ್ರ ಟಾಲ್ಕಮ್ ಪೌಡರ್ ಹಚ್ಚಿಕೊಳ್ಳಿ. ಇದು ಚರ್ಮವನ್ನು ಕೋಮಲಗೊಳಿಸುತ್ತದೆ.
ಟಾಲ್ಕಮ್ ಪೌಡರನ್ನು ಶುಷ್ಕ ಶಾಂಪೂ ರೀತಿಯಲ್ಲಿ ಬಳಸಬಹುದು. ಕೂದಲು ಆಯ್ಲಿಯಾಗಿದ್ದರೆ ಸ್ವಲ್ಪ ಟಾಲ್ಕಮ್ ಪೌಡರನ್ನು ಕೂದಲಿಗೆ ಹಾಕಿ. ಇದು ತೈಲವನ್ನು ಹೀರಿಕೊಂಡು ಕೂದಲು ಶುಷ್ಕವಾಗಿ ಹೊಳೆಯುವಂತೆ ಮಾಡುತ್ತದೆ.
ಟಾಲ್ಕಮ್ ಪೌಡರ್ ಬೆವರಿನ ವಾಸನೆಯನ್ನು ಕಡಿಮೆ ಮಾಡುತ್ತದೆ. ಚರ್ಮದಲ್ಲಿ ಕಾಣಿಸಿಕೊಳ್ಳುವ ತುರಿಕೆಯನ್ನು ಟಾಲ್ಕಮ್ ಪೌಡರ್ ತಡೆಯುತ್ತದೆ.