ವಿಕಾರಾಬಾದ್ : ಬಿಯರ್ ಬೇಕು ಎಂದು ಹೇಳಿ ಸ್ನೇಹಿತರಿಗೆ ಕರೆ ಮಾಡಿ ತರಿಸಿಕೊಳ್ಳುವ ವ್ಯಕ್ತಿಗಳನ್ನು ನೋಡಿದ್ದೇವೆ. ಆದರೆ ಇಲ್ಲಿ ತೆಲಂಗಾಣದ ವ್ಯಕ್ತಿಯೊಬ್ಬ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಬಿಯರ್ ತಂದು ಕೊಡಲು ಹೇಳಿದ ಹಾಸ್ಯಾಸ್ಪದ ಘಟನೆ ನಡೆದಿದೆ.
ತೆಲಂಗಾಣದ ವಿಕರಾಬಾದಿನ ದೌಲತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಕಾರಾಬಾದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ರಾತ್ರಿ ಪೊಲೀಸ್ ಸಹಾಯವಾಣಿ ಸಂಖ್ಯೆ 100 ಕ್ಕೆ ಕರೆ ಮಾಡಿ, ಎರಡು ಬಿಯರ್ ಬಾಟಲ್ ಅನ್ನು ತರಲು ಹೇಳಿದ್ದಾನೆ.
ಅಮಿತ್ ಶಾ ಕುಡಿಯೋ ನೀರಿನ ಬಾಟಲ್ ಬೆಲೆ ಬರೋಬ್ಬರಿ 850 ರೂಪಾಯಿ..!
ಗೋಕಾ ಫಸ್ಲಾಬಾದ್ ಗ್ರಾಮದ ನಿವಾಸಿ ಜೆ. ಮಧು 100 ಕ್ಕೆ ಕರೆ ಮಾಡಿ ಅಪಾಯದಲ್ಲಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಈತನ ಮಾತನ್ನು ನಂಬಿದ ಪೊಲೀಸರು ಸುಮಾರು ಏಳು ಕಿಲೋ ಮೀಟರ್ ದೂರದಿಂದ ಆತನನ್ನು ರಕ್ಷಿಸಲು ಆಗಮಿಸಿದ್ದಾರೆ. ಆದರೆ ಆತ ಅವರಿಗೆ ಎರಡು ಬಾಟಲ್ ಬಿಯರ್ ತಂದುಕೊಡಲು ಹೇಳಿದ್ದಾನೆ.
ಮಧು ಮದುವೆ ಮನೆಯಲ್ಲಿ ಪಾನಮತ್ತನಾಗಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಅಲ್ಲಿಗೆ ತೆರಳಿದ ಪೊಲೀಸರಿಗೆ ತಾನು ಮದ್ಯ ಸೇವಿಸಿದ್ದೇನೆ. ಪೊಲೀಸರು ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತಾರೆ ಎಂದು ಕೇಳಿದ್ದೇನೆ. ಎಲ್ಲಾ ವೈನ್ ಶಾಪ್ ಗಳು ಮುಚ್ಚಿವೆ. ಹಾಗಾಗಿ ನನಗೆ ಎರಡು ಬಾಟಲ್ ಬಿಯರ್ ತಂದುಕೊಡಿ ಎಂದು ಕೇಳಿದ್ದಾನೆ. ನಂತರ ಈತನ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಈತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಾರ್ಚ್‌ನಲ್ಲಿ, ನಲ್ಗೊಂಡ ಜಿಲ್ಲೆಯ ನವೀನ್ ಎಂಬಾತ ತಮ್ಮ ಪತ್ನಿ ಮಟನ್ ಕರಿ ಮಾಡಿಲ್ಲ ಎಂದು ದೂರು ನೀಡಲು 100 ಗೆ ಪದೇ ಪದೇ ಡಯಲ್ ಮಾಡಿದ ಘಟನೆ ನಡೆದಿತ್ತು.