ಲಖ್ನೋ: ಮದುವೆಯ ನೆಪದಲ್ಲಿ ಕಳೆದ ಎರಡು ವರ್ಷಗಳಿಂದ ತನ್ನ ಲಿವ್ -ಇನ್ ಸಂಗಾತಿ ದೈಹಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಯುವತಿ ದೂರು ನೀಡಿದ್ದು, ಆರೋಪಿಯನ್ನು ಲಖ್ನೋ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ರಾಹುಲ್ ಮಿಶ್ರಾ ಎಂದು ಗುರುತಿಸಲಾಗಿದೆ. ಲಕ್ನೋದ ಮಡಿಯಾನ್ ಪ್ರದೇಶದ ನಿವಾಸಿಯಾಗಿರುವ ರಾಹುಲ್ ಕಳೆದ ಎರಡು ವರ್ಷಗಳಿಂದ ಸಂತ್ರಸ್ತೆಯೊಂದಿಗೆ ಲೀಸ್ ಆಸ್ತಿಯಲ್ಲಿ ವಾಸವಿದ್ದ.
ಆ ಅವಧಿಯಲ್ಲಿ ಆಕೆಗೆ ದೈಹಿಕ ಹಿಂಸೆ ನೀಡಿದ್ದ. ಅವಳು ಗರ್ಭಿಣಿಯಾದಾಗ, ಗರ್ಭಪಾತ ಮಾಡಿಸಲು ಒತ್ತಾಯಿಸಿದ್ದ. ಮದುವೆಯಾಗುವಂತೆ ಆತನ ಮೇಲೆ ಒತ್ತಡ ಹೇರಿದಾಗ ಆಕೆಯನ್ನು ಮನೆಯಿಂದ ಹೊರ ಹಾಕಿದ್ದಾನೆ.
ಮಹಿಳೆಯ ಆರೋಪದ ಆಧಾರದ ಮೇಲೆ ಆರೋಪಿಯ ವಿರುದ್ಧ ಐಪಿಸಿಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ ಎಂದು ಉತ್ತರ ವಲಯ ಡಿಸಿಪಿ ಎಸ್. ಚಿನಪ್ಪ ತಿಳಿಸಿದ್ದಾರೆ.