ಅದು ಭರ್ಜರಿಯಾಗಿ ನಡೆಯುತ್ತಿದ್ದ ಮದುವೆ. ಗೆಳೆಯರು ಸಂಬಂಧಿಕರು ಮದುವೆ ಸಮಾರಂಭವನ್ನ ಎಂಜಾಯ್ ಮಾಡುತ್ತಿದ್ದರು.
ಅದೇ ಸಮಾರಂಭದಲ್ಲಿ ಡಿಜೆ ಹಾಡುಗಳು ಜೋರ್‌ದಾರ್ ಆಗಿ ಹಾಕಲಾಗಿತ್ತು. ಆಗಲೇ ನೋಡಿ ಒಂದು ದೊಡ್ಡ ಎಡವಟ್ಟು ಸಂಭವಿಸಿತ್ತು. ವರ ಕೈಯಲ್ಲಿದ್ದ ಬಂದೂಕಿನಿಂದಲೇ ಅತಿಥಿಯನ್ನ ಗುಂಡಿಕ್ಕಿ ಕೊಂದು ಹಾಕಿದ್ದ.
ಈ ಘಟನೆ ಉತ್ತರಪ್ರದೇಶದ ಮುಜಫರ್‌ನಗರದ ಶಹಾಪುರ್ ಪ್ರದೇಶದಲ್ಲಿ ನಡೆದಿದೆ. ಅಸಲಿಗೆ ಮದುವೆ ಸಮಾರಂಭದಲ್ಲಿ ಡಿಜೆ ಹಾಡಿನ ಬಗ್ಗೆ ವಾದ – ವಿವಾದ ನಡೆದಿದೆ. ಅದೇ ಸಂದರ್ಭದಲ್ಲಿ ವರ, ವಧುವಿನ ಕಡೆ ವ್ಯಕ್ತಿಯಾದ ಜಾಫರ್‌ನನ್ನ ಕೋಪದ ಭರದಲ್ಲಿ ಗುಂಡಿಟ್ಟು ಕೊಂದಿದ್ದಾನೆ. ಅಷ್ಟೆ ಅಲ್ಲ ಇನ್ನೂ ಒಬ್ಬನ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ವರ ಇಫ್ತಿಕರ್ ವಿರುದ್ಧ ಕ್ರಮ ಕೈಗೊಂಡಿದ್ದಾರೆ.