
ಆಗ್ರಾ ಕೋಟೆಯ ಮುಂಭಾಗದ ಕುರಿತು ಮಾಡಿದ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಮಸ್ಕ್ ಅವರು, 2007 ರಲ್ಲಿ ಭಾರತಕ್ಕೆ ಭೇಟಿ ನೀಡಿದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ತಾಜ್ ಮಹಲ್ ಅನ್ನು ಅವರು ನಿಜವಾಗಿಯೂ ವಿಶ್ವದ ಅದ್ಭುತ ತಾಣ ಎಂದು ಕರೆದಿದ್ದಾರೆ. ಅಲ್ಲದೆ ಅವರು, 2007ರಲ್ಲಿ ಭೇಟಿ ನೀಡಿದ್ದ ವೇಳೆ ತಾಜ್ ಮಹಲ್ ಮುಂದೆ ಕ್ಲಿಕ್ಕಿಸಿರುವ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಸದ್ಯ, ಈ ಟ್ವೀಟ್ ಈಗ ಸಾಕಷ್ಟು ಊಹಾಪೋಹಗಳನ್ನು ಹುಟ್ಟುಹಾಕಿದೆ. ಮಸ್ಕ್ ಭಾರತಕ್ಕೆ ಮತ್ತೊಂದು ಪ್ರವಾಸವನ್ನು ಯೋಜಿಸುತ್ತಿದ್ದಾರೆಯೇ ಎಂದು ಹಲವರು ಆಶ್ಚರ್ಯ ಪಡುತ್ತಿದ್ದಾರೆ. ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರು, ಮೊದಲ ಟೆಸ್ಲಾವನ್ನು ನೀಡಲು ಮಸ್ಕ್ ಭಾರತಕ್ಕೆ ಯಾವಾಗ ಭೇಟಿ ನೀಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಅಂದಹಾಗೆ, ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಬಿಡುಗಡೆ ಮಾಡಲು ತಾನು ಸರ್ಕಾರದಿಂದ ಸವಾಲುಗಳನ್ನು ಎದುರಿಸುತ್ತಿರುವುದಾಗಿ ಮಸ್ಕ್ ಈ ಹಿಂದೆ ಹೇಳಿದ್ದರು.