ಬ್ಯಾಂಕಿಂಗ್ ಕ್ಷೇತ್ರಕ್ಕೆ ಸೇರಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಕರ್ನಾಟಕ ಬ್ಯಾಂಕ್ ಕ್ಲರ್ಕ್ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ಮತ್ತು ಅರ್ಹತೆ ಇರುವವರು ಅಧಿಕೃತ ವೆಬ್‌ಸೈಟ್ karnatakabank.com ನಲ್ಲಿ ಅರ್ಹತೆ ಮತ್ತು ವೇತನದ ವಿವರಗಳನ್ನು ಪರಿಶೀಲಿಸಬಹುದು. ಅರ್ಜಿದಾರರು ಮೇ 21, 2022 ರವರೆಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು
ಆನ್‌ಲೈನ್ ನೋಂದಣಿ ಗೇಟ್‌ವೇ/ಶುಲ್ಕ ಪಾವತಿಯ ಆರಂಭಿಕ ದಿನಾಂಕ: ಮೇ 10
ಆನ್‌ಲೈನ್ ನೋಂದಣಿ ಗೇಟ್‌ವೇ/ಶುಲ್ಕ ಪಾವತಿಯ ಕೊನೆಯ ದಿನಾಂಕ: ಮೇ 21
ಹುದ್ದೆಯ ವಿವರ
ಗುಮಾಸ್ತ/ಕ್ಲರ್ಕ್
ಅರ್ಹತಾ ಮಾನದಂಡ
ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಯು ಯಾವುದೇ ಯುಜಿಸಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಕನಿಷ್ಠ ಶೇ. 60 ಅಂಕಗಳೊಂದಿಗೆ(ಪ್ರಥಮ ದರ್ಜೆ)/ಸಮಾನ ದರ್ಜೆಯೊಂದಿಗೆ ಯಾವುದೇ ವಿಭಾಗದಲ್ಲಿ ಪದವೀಧರರಾಗಿರಬೇಕು. ಅಭ್ಯರ್ಥಿಗಳು 01-05-2022 ರಂತೆ ಪದವೀಧರರಾಗಿರಬೇಕು. ಪದವಿ ಪರೀಕ್ಷೆಯ ಫಲಿತಾಂಶಗಳಿಗಾಗಿ ಕಾಯುತ್ತಿರುವವರು/ಪದವಿಯನ್ನು ಅನುಸರಿಸುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಆಯ್ಕೆ ಪ್ರಕ್ರಿಯೆ
ಆಯ್ಕೆ ಪ್ರಕ್ರಿಯೆಯು ಆನ್ ಲೈನ್ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಆನ್ ಲೈನ್ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಜೂನ್ 2022 ರಲ್ಲಿ ಬೆಂಗಳೂರು, ಧಾರವಾಡ, ಹುಬ್ಬಳ್ಳಿ, ಮಂಗಳೂರು, ಮುಂಬೈ, ಮೈಸೂರು, ನವದೆಹಲಿ ಮತ್ತು ಶಿವಮೊಗ್ಗ ಕೇಂದ್ರಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ.
ವಯೋಮಿತಿ
01-05-2022 ರಂತೆ ಗರಿಷ್ಠ 26 ವರ್ಷಗಳು
ಅರ್ಜಿ ಶುಲ್ಕ
ಸಾಮಾನ್ಯ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 700 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ, SC, ST ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು 600 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
ಮಾಹಿತಿಗಾಗಿ ಕರ್ನಾಟಕ ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್ karnatakabank.com ಗೆ ಭೇಟಿ ನೀಡಬಹುದಾಗಿದೆ.