ಶ್ಯಾಮ್ ಗಡ್ : ಮಧ್ಯಪ್ರದೇಶದ ಶ್ಯಾಮ್ ಗಡ್ ನಲ್ಲಿ ಸ್ಥಳೀಯ ನಾಗರಿಕ ಸಂಸ್ಥೆ ಆಯೋಜಿಸಿದ್ದ ದೇವಿ ಮೇಳದಲ್ಲಿ ಅಶ್ಲೀಲ ನೃತ್ಯ ಪ್ರದರ್ಶನಕ್ಕೆ ಅನುಮತಿ ನೀಡಿದ ಮಂಡಸೌರ್ ನ ಮುಖ್ಯ ಮುನ್ಸಿಪಾಲ್ ಅಧಿಕಾರಿಯನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.
ಮಧ್ಯಪ್ರದೇಶದ ಮಂಡಸೌರ್ ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿಮೀ ದೂರದಲ್ಲಿರುವ ಶ್ಯಾಮ್ ಗಡ್ ಮಾತೆ ಮಹಿಷಾಸುರ ಮರ್ದಿನಿ ದೇವಿ ಮೇಳವನ್ನು ನಡೆಸಲಾಗಿತ್ತು. ಈ ವೇಳೆ ನಡೆಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಂಡಸೌರ್ ನ ಮುಖ್ಯ ಮುನ್ಸಿಪಾಲ್ ಅಧಿಕಾರಿ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಮಂಡಸೌರ್ ನ ಮುಖ್ಯ ಪುರಸಭೆ ಅಧಿಕಾರಿ ನಾಸಿರ್ ಅಲಿ ಖಾನ್ ಅಮಾನತುಗೊಂಡ ಅಧಿಕಾರಿ. ವಿಡಿಯೋದಲ್ಲಿ ಅಶ್ಲೀಲ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವುದನ್ನು ಕಾಣಬಹುದು. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ರಾಜ್ಯ ನಗರಾಡಳಿತ ಸಚಿವ ಭೂಪೇಂದ್ರ ಸಿಂಗ್ ಅವರಿಗೆ ಪತ್ರ ಬರೆದ ರಾಜ್ಯದ ಕ್ಯಾಬಿನೆಟ್ ಸಚಿವ ಹರ್ದೀಪ್ ಸಿಂಗ್ ಡ್ಯಾಂಗ್ ಅವರು ನಾಸಿರ್ ಅಲಿ ಖಾನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಅಲ್ಲದೇ ಆಯೋಜನೆಯಾಗಿದ್ದ ಈ ನೃತ್ಯವು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತದೆ ಎಂದು ಹೇಳಿದ್ದರು.
BIG NEWS: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಿರುದ್ಧ ದೂರು ದಾಖಲು
ಇನ್ನು ಮಂಡಸೌರ್ ನ ಜಿಲ್ಲಾಧಿಕಾರಿ ಘಟನೆಯ ಸಮಗ್ರ ವರದಿಯನ್ನು ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಖಾನ್ ಅವರನ್ನು ಉಜ್ಜಯಿನಿಯ ವಿಭಾಗೀಯ ಆಯುಕ್ತ ಸಂದೀಪ್ ಯಾದವ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಅಶ್ಲೀಲ ನೃತ್ಯ ಆಯೋಜಿಸಿದ್ದ ವೇದಿಕೆಯಲ್ಲಿ ಮಾತೆ ಮಹಿಷಾಸುರ ಮರ್ದಿನಿ ದೇವಿ ಹಾಗೂ ಚುನಾಯಿತ ಪ್ರತಿನಿಧಿಗಳ ಫೋಟೋಗಳಿರುವ ಬ್ಯಾನರ್ ಅನ್ನು ಹಾಕಲಾಗಿತ್ತು. ಅಲ್ಲದೇ ಕಾರ್ಯಕ್ರಮದ ಉದ್ದೇಶ ತಿಳಿಯದೆ ಕಾರ್ಯಕ್ರಮಕ್ಕೆ ಅನುಮತಿ ನೀಡಿದ್ದ ಪುರಸಭೆ ಮುಖ್ಯಾಧಿಕಾರಿ ನಾಸೀರ್ ಅಲಿಖಾನ್ ಅವರು ಕಾರ್ಯಕ್ರಮದಲ್ಲಿ ಮುಕ್ತವಾಗಿ ಭಾಗವಹಿಸಿದ್ದಾರೆ. ಇದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಅಮಾನತು ಆದೇಶದಲ್ಲಿ ತಿಳಿಸಲಾಗಿದೆ.