ಸೈಬರ್ ಕ್ರೈಂ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಕ್ರಿಮಿನಲ್‌ಗಳು ತೆರೆಯ ಹಿಂದೆಯೇ ನಿಂತು ಅಪರಾಧಗಳನ್ನ ಮಾಡಿ ಎಸ್ಕೇಪ್ ಆಗಿ ಬಿಡುತ್ತಾರೆ. ಆ ಅಪರಾಧಿಗಳು ಪೊಲೀಸರ ಕೈಗೆ ಸಿಗೋದು ಕೂಡಾ ಕಷ್ಟ. ಈಗ ಇದೇ ಸೈಬರ್ ಕ್ರಿಮಿನಲ್‌ಗಳಿಗೆ ಟಾರ್ಗೆಟ್ ಆಗಿದ್ದಾರೆ ಬಿಜೆಪಿ ಸಂಸದೆ, ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್.
ಸೈಬರ್ ಕ್ರಿಮಿನಲ್‌ಗಳು ನಕಲಿ ವಾಟ್ಸಾಪ್ ನಂಬರ್‌ಗಳನ್ನ ಬಳಸಿ ಸಂಸದೆ ಪ್ರಗ್ಯಾ ಸಿಂಗ್ ಅವರಿಗೆ ಅಶ್ಲೀಲ ಸಂದೇಶಗಳನ್ನ ನಿರಂತರವಾಗಿ ಕಳುಹಿಸಿದ್ದಾರೆ. ಈ ನಂಬರ್‌ಗಳನ್ನ ಬ್ಲಾಕ್ ಮಾಡಿದರೂ ಬೇರೆ ಬೇರೆ ನಂಬರ್‌ನಿಂದ ಪದೇ ಪದೇ ಆಕ್ಷೇಪಾರ್ಹ ಸಂದೇಶಗಳನ್ನ ಕಳುಹಿಸಿ, ಪುಂಡರು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ. ಸಂಸದೆಗೆ ಯಾವ ಮೊಬೈಲ್‌ನಿಂದ ಸಂದೇಶ ಬರುತ್ತಿದೆ ಅನ್ನೋದನ್ನ ಪತ್ತೆ ಹಚ್ಚುವಂತೆ ಸೈಬರ್ ಕ್ರೈಂಗೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಈಗಾಗಲೇ ಸೂಚಿಸಿದ್ದಾರೆ. ಇದರ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ.
ತಾಳೆ ತೋಟಕ್ಕೆ ನುಗ್ಗಿದ್ದ ಭಾರೀ ಗಾತ್ರದ ಕಾಳಿಂಗ ಸರ್ಪ ಹಿಡಿದು ರಕ್ಷಣೆ
ಕಳೆದ ಕೆಲವು ದಿನಗಳಿಂದ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರಿಗೆ ಇಂತಹ ಕಿರಿಕಿರಿ ಕೊಡುವಂತಹ ಸಂದೇಶಗಳು ಅವರ ಮೊಬೈಲ್‌ಗೆ ಬರುತ್ತಲೇ ಇದ್ದವು. ಮೆಸೇಜ್ ಬರುತ್ತಿದ್ದ ವಾಟ್ಸಾಪ್ ನಂಬರ್‌ನ ಪ್ರೊಫೈಲ್‌ನಲ್ಲಿ ಮೊದಲು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಫೋಟೋ ಹಾಕಲಾಗಿತ್ತು. ಆ ನಂತರ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಫೋಟೋ ಹಾಕಿದ್ದರು ಅನ್ನೋ ಮಾಹಿತಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಅವರು ಕೊಟ್ಟಿದ್ದಾರೆ.