ತಾಳೆ ತೋಟದಲ್ಲಿ ಕಾಣಿಸಿಕೊಂಡ ಭಾರೀ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ಕಾಡಿಗೆ ಕಳಿಸಿದ ಘಟನೆ ವಿಶಾಖಪಟ್ಟಣ ಜಿಲ್ಲೆಯಲ್ಲಿ ನಡೆದಿದೆ. 13 ಅಡಿ ಎತ್ತರದ ಕಾಳಿಂಗ ಸರ್ಪ ಮೇ 8 ರಂದು ಘಾಟ್ ರಸ್ತೆಯ ಬಳಿ ಸೈದರಾವ್ ಎಂಬ ತಾಳೆ ತೋಟದಲ್ಲಿ ಕಾಣಿಸಿತ್ತು.
ಬಳಿಕ ಪೂರ್ವ ಘಟ್ಟಗಳ ವೈಲ್ಡ್‌ಲೈಫ್ ಸೊಸೈಟಿಯ ಸದಸ್ಯ ಹಾಗೂ ಉರಗ ರಕ್ಷಕ ವೆಂಕಟೇಶ್‌ಗೆ ದೂರವಾಣಿ ಮೂಲಕ ಮಾಹಿತಿ ನೀಡಲಾಯಿತು. ಸ್ವಲ್ಪ ಸಮಯದ ನಂತರ ವೆಂಕಟೇಶ್ ತೋಟವನ್ನು ತಲುಪಿ ಹಾವನ್ನು ಬಲೆಗೆ ಬೀಳಿಸಿಕೊಂಡರು. ಬಳಿಕ ಅದನ್ನು ಗೋಣಿ ಚೀಲದಲ್ಲಿ ಹಾಕಿ ವಂಟ್ಲಮಾಮಿಡಿ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.
ಒಳ ಉಡುಪಿನಲ್ಲಿತ್ತು 1 ಕೋಟಿ ರೂ. ಮೌಲ್ಯದ ಚಿನ್ನ….!
2020ರ ಜುಲೈನಲ್ಲಿ ತಮಿಳುನಾಡಿನ ಅರಣ್ಯ ಇಲಾಖೆಯು ಕೊಯಮತ್ತೂರಿನ ನರಸೀಪುರಂ ಗ್ರಾಮದಿಂದ 15 ಅಡಿ ನಾಗರಹಾವನ್ನು ಹಿಡಿದಿತ್ತು. ಬಳಿಕ ಹಾವನ್ನು ಸಿರುವಣಿ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.
ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ಸ್ ರೆಡ್ ಲಿಸ್ಟ್‌ನಲ್ಲಿರುವ ಕಿಂಗ್ ಕೋಬ್ರಾ ವಿಶ್ವದ ಅತಿ ಉದ್ದದ ವಿಷಕಾರಿ ಹಾವು ಆಗಿದೆ, ಇದು 18.5 ಅಡಿ ಉದ್ದದವರೆಗೆ ಬೆಳೆಯುತ್ತದೆ ಎಂಬ ಮಾಹಿತಿ ಇದೆ.