alex Certify ಉರಿಬಿಸಿಲ ಎಫೆಕ್ಟ್; 123 ಟ್ರಾಫಿಕ್ ಸಿಗ್ನಲ್ ಲೈಟ್ಸ್ 3 ಗಂಟೆಗಳ ಕಾಲ ಆಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉರಿಬಿಸಿಲ ಎಫೆಕ್ಟ್; 123 ಟ್ರಾಫಿಕ್ ಸಿಗ್ನಲ್ ಲೈಟ್ಸ್ 3 ಗಂಟೆಗಳ ಕಾಲ ಆಫ್

ಒಂದು ಕಡೆ ಧಗಧಗ ಉರಿವ ಬಿಸಿಲು. ಇನ್ನೊಂದು ಕಡೆ ದಿನದಿಂದ ದಿನಕ್ಕೆ ಉಂಟಾಗುತ್ತಿರೋ ವಿದ್ಯುತ್ತಿನ ಅಭಾವ. ಇದೇ ಕಾರಣಕ್ಕೆ ಈ ಹೊಸ ಟ್ರಾಫಿಕ್ ರೂಲ್ಸ್ ಒಂದು ಜಾರಿಯಾಗುತ್ತಿದೆ. ಆ ರೂಲ್ಸ್ ಏನಂದರೆ ಮಧ್ಯಾಹ್ನ 1ರಿಂದ 4 ಗಂಟೆಯವರೆಗೆ ಟ್ರಾಫಿಕ್ ಸಿಗ್ನಲ್ ಲೈಟ್ ಆಫ್ ಮಾಡಲಾಗುವುದು.

ಈ ನಿಯಮ ಎಲ್ಲ ಟ್ರಾಫಿಕ್ ಸಿಗ್ನಲ್ ಲೈಟ್ಸ್‌ ಗಳಿಗೆ ಅನ್ವಯವಾಗುವುದಿಲ್ಲ. ಬದಲಾಗಿ 123 ಸಿಗ್ನಲ್ ಲೈಟ್ಸ್‌ಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತೆ. ಉಳಿದ ಕಡೆಗಳಲ್ಲಿ ಸಮಯದಲ್ಲಿ ಬದಲಾವಣೆ ಮಾಡಲಾಗುವುದು. ಅಷ್ಟಕ್ಕೂ ಈ ರೀತಿಯ ನಿಯಮ ಜಾರಿಗಾಗುತ್ತಿರುವುದು ಬೆಂಗಳೂರಿನಲ್ಲಿ ಅಲ್ಲ. ಬದಲಾಗಿ ಅಹಮದಾಬಾದ್‌‌ನಲ್ಲಿ.

ನಗರದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಲೇ ಹೋಗುತ್ತಿದೆ. ಈಗ ಏನಿಲ್ಲ ಅಂದರೂ ತಾಪಮಾನ 45ಡಿಗ್ರಿ ಸೆಲ್ಸಿಯಸ್‌ನಷ್ಟು ಇದೆ. ಇದೇ ಕಾರಣಕ್ಕಾಗಿ ಈಗ 1ರಿಂದ 4 ಗಂಟೆಯವರೆಗೆ ಟ್ರಾಫಿಕ್ ಸಿಗ್ನಲ್ ಲೈಟ್ಸ್‌ಗಳನ್ನ ಸ್ಥಗಿತಗೊಳಿಸಲಾಗುವುದು. ಈ ಸಂಚಾರಿ ವಿದ್ಯುತ್‌ ದೀಪಗಳು ಆಗ ಬ್ಲಿಂಕಿಂಗ್ ಮೋಡ್‌ನಲ್ಲಿ ಇರಿಸಲಾಗುವುದು. ಇನ್ನೂ ಸುಮಾರು 57 ಟ್ರಾಫಿಕ್ ಸಿಗ್ನಲ್‌ಗಳ ಸಮಯವನ್ನು ಕಡಿಮೆ ಮಾಡಲಾಗುವುದು.

ಈಗಾಗಲೇ ಇಂತಹ ನಿಯಮ ಗುಜರಾತ್‌ನ ರಾಜಕೋಟ್‌ನಲ್ಲಿ ಜಾರಿಯಾಗಿದ್ದು, ಈಗ ಅಹಮದಾಬಾದ್‌ನಲ್ಲೂ ಈ ರೀತಿಯ ನಿಯಮ ಜಾರಿ ಮಾಡಲಾಗುವುದು ಅಂತ ಸಂಚಾರಿ ಪೊಲೀಸ್ ಅಧೀಕ್ಷಕರಾದ ಜೆಸಿಪಿ ಮಯಾಂಕ್ ಸಿಂಗ್ ನಿರ್ಧಾರ ಮಾಡಿದ್ದಾರೆ. ಸದ್ಯಕ್ಕೆ ಈ ನಿಯಮ 2 ದಿನಗಳವರೆಗೆ ಪ್ರಾಯೋಗಿಕವಾಗಿ ಮಾತ್ರ ಮಾಡಲಾಗುವುದು. ಈ ನಿಯಮದಿಂದ ಚಾಲಕರಿಗೆ ಕೊಂಚ ಮಟ್ಟಿಗೆ ಸಮಾಧಾನ ತಂದಿರೋದಂತೂ ನಿಜ.

ಅಸಲಿಗೆ ಅತಿಯಾದ ಬಿಸಿಲಿನ ಹೊಡೆತದಿಂದ ಕೊಂಚ ಮಟ್ಟಿಗಾದರೂ ಸುರಕ್ಷಿತವಾಗಿರಬಹುದು. ಉರಿವ ಬಿಸಿಲಿನಲ್ಲಿ ಸಿಗ್ನಲ್‌ನಲ್ಲಿ ನಿಲ್ಲುವುದರಿಂದ ಚಾಲಕರಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಸಮಸ್ಯೆಗೆ ಸದ್ಯಕ್ಕೆ ಈ ಪರಿಹಾರ ಕೊಂಚ ಮಟ್ಟಿಗೆ ನೆಮ್ಮದಿ ತಂದುಕೊಟ್ಟಿದೆ. ಬಿಸಿಲ ತಾಪಮಾನ ಕಡಿಮೆ ಆಗುತ್ತಿದ್ದಂತೆ ಮತ್ತೆ ಯಥಾ ಪ್ರಕಾರ ಹಳೆಯ ನಿಯಮವೇ ಜಾರಿಮಾಡಲಾವುದು ಅಂತ ಸಂಚಾರಿ ಪೊಲೀಸ್ ವಿಭಾಗ ಈಗಾಗಲೇ ತಿಳಿಸಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...