ಕುಡುಕನೊಬ್ಬ ಎರಡು ಬಾಟಲಿ ಕುಡಿದರೂ ಸಹ ನಶೆ ಏರದ್ದಕ್ಕೆ ಮದ್ಯದ ಗುಣಮಟ್ಟದ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದು, ಅಲ್ಲದೆ ಈ ಕುರಿತು ಸರ್ಕಾರಕ್ಕೆ ದೂರು ನೀಡಿದ್ದಾನೆ. ಸರ್ಕಾರವೂ ಸಹ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆಗೆ ಆದೇಶಿಸಿದೆ.
ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಘಟನೆ ನಡೆದಿದ್ದು ಲೋಕೇಶ್ ಸೋಥಿಯಾ ಎಂಬಾತ ಸ್ಥಳೀಯ ಅಂಗಡಿಯಿಂದ 4 ಬಾಟಲಿ ಮದ್ಯವನ್ನು ಖರೀದಿಸಿದ್ದ. ಈ ಪೈಕಿ ಆತ ಎರಡು ಬಾಟಲಿ ಕುಡಿದಿದ್ದು, ಆದರೆ ನಶೆ ಏರಿರಲಿಲ್ಲ.
ಹೀಗಾಗಿ ಮದ್ಯಕ್ಕೆ ನೀರು ಬೆರೆಸಲಾಗಿದೆ ಎಂದು ಆರೋಪಿಸಿ ದೂರು ನೀಡಿದ್ದು, ಇದೀಗ ತನ್ನ ಬಳಿ ಇರುವ ಇನ್ನೆರಡು ಬಾಟಲುಗಳಲ್ಲಿರುವ ಮದ್ಯದ ಗುಣಮಟ್ಟವನ್ನು ಪರೀಕ್ಷಿಸುವಂತೆ ಅಬಕಾರಿ ಅಧಿಕಾರಿಗಳಿಗೆ ದೂರು ನೀಡಿದ್ದಾನೆ. ಹೀಗಾಗಿ ಈ ಕುರಿತು ಈಗ ತನಿಖೆಗೆ ಆದೇಶಿಸಲಾಗಿದೆ.