alex Certify ಸೋನು ನಿಗಮ್-ಶಾನ್ ಜೊತೆಗಿನ ಕ್ರೆಡ್‍ನ ಹೊಸ ಜಾಹೀರಾತು: ಟ್ವಿಟ್ಟರ್ ನಲ್ಲಿ ಮೀಮ್ ಗಳ ಸುರಿಮಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೋನು ನಿಗಮ್-ಶಾನ್ ಜೊತೆಗಿನ ಕ್ರೆಡ್‍ನ ಹೊಸ ಜಾಹೀರಾತು: ಟ್ವಿಟ್ಟರ್ ನಲ್ಲಿ ಮೀಮ್ ಗಳ ಸುರಿಮಳೆ

90ರ ದಶಕದ ಐಕಾನ್‌ಗಳಾದ ಸೋನು ನಿಗಮ್ ಮತ್ತು ಶಾನ್ ಅವರನ್ನು ಒಳಗೊಂಡ ಕ್ರೆಡ್‌ನ ಹೊಸ ಜಾಹೀರಾತು ಟ್ವಿಟ್ಟರ್ ನಲ್ಲಿ ಬಿರುಗಾಳಿ ಎಬ್ಬಿಸಿದೆ.

ಗಾಯಕ ಜೋಡಿಯು ಕಾಡು ಮತ್ತು ಮರುಭೂಮಿ ಸೇರಿದಂತೆ ಅಸಂಖ್ಯಾತ ಕಡೆಗಳಲ್ಲಿ ಮೋಜು ಮಾಡುವುದನ್ನು ಜಾಹೀರಾತು ವಿಡಿಯೋದಲ್ಲಿ ತೋರಿಸಲಾಗಿದೆ. ಈ ಜಾಹೀರಾತು 90 ರ ದಶಕದ ಪಾಪ್ ವಿಡಿಯೋ ಸ್ವರೂಪವನ್ನು ನಕಲಿಸಿದೆ. ಆ ಸಮಯದಲ್ಲಿ ಶಾನ್ ಮತ್ತು ಸೋನು ನಿಗಮ್ ಸಂಗೀತ ಸಾಮ್ರಾಜ್ಯವನ್ನು ಆಳುತ್ತಿದ್ದರು. ಈ ವಿಡಿಯೋ ಬಿಡುಗಡೆಯಾದಾಗಿನಿಂದ ನೆಟ್ಟಿಗರು ಮೀಮ್‌ಗಳ ಸುರಿಮಳೆ ಸೃಷ್ಟಿಸುತ್ತಿದ್ದಾರೆ.

ಕ್ರೆಡ್‌ನ ಕೊನೆಯ ಜಾಹೀರಾತು ನಿರ್ಮಾದ ವಿಂಟೇಜ್ ಜಾಹೀರಾತನ್ನು ಹೋಲುತ್ತದೆ. ಅದು ರಾಮಾಯಣ ಖ್ಯಾತಿಯ ನಟಿ ದೀಪಿಕಾ ಚಿಖಾಲಿಯಾ ಅವರನ್ನು ಒಳಗೊಂಡಿತ್ತು. ಚಿಖಾಲಿಯಾ ಪಾತ್ರವನ್ನು ಕರಿಷ್ಮಾ ಕಪೂರ್ ನಿರ್ವಹಿಸಿದ್ದಾರೆ. ಜಾಹೀರಾತಿನ ಮೂಲಕ, ಕಪೂರ್ ಕ್ರೆಡ್ ಬೌಂಟಿಯನ್ನು ಪರಿಚಯಿಸಿದ್ರು. ಇದು ಐಪಿಎಲ್‌ನ ಈ ಋತುವಿನಲ್ಲಿ ಬ್ರ್ಯಾಂಡ್‌ನ ಸದಸ್ಯರಿಗೆ ಬಹುಮಾನಗಳನ್ನು ಗೆಲ್ಲಲು ಅವಕಾಶ ನೀಡುವ ಆಹ್ವಾನ ಆಧಾರಿತ ವೈಶಿಷ್ಟ್ಯವಾಗಿದೆ. ಈ ಚಿತ್ರವನ್ನು ಅರ್ಲಿಮ್ಯಾನ್ ಫಿಲ್ಮ್ಸ್ ನಿರ್ಮಿಸಿದ್ದು, ಅಯಪ್ಪ ನಿರ್ದೇಶಿಸಿದ್ದಾರೆ. ಕರಣ್ ಮಲ್ಹೋತ್ರಾ ಸಂಗೀತ ಸಂಯೋಜನೆ ಮಾಡಿದ್ದಾರೆ.

https://twitter.com/singer_shaan/status/1521818196726018049?ref_src=twsrc%5Etfw%7Ctwcamp%5Etweetembed%7Ctwterm%5E1521818196726018049%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fcreds-new-ad-with-sonu-nigam-and-shaan-is-blessing-twitter-feeds-with-90s-aesthetics-5133205.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...