alex Certify ವಿಮಾನದೊಳಗೆ ಹೊಡೆದಾಟ ನಡೆಸಿದ ಪ್ರಯಾಣಿಕರು: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನದೊಳಗೆ ಹೊಡೆದಾಟ ನಡೆಸಿದ ಪ್ರಯಾಣಿಕರು: ವಿಡಿಯೋ ವೈರಲ್

Video of Passengers Raining Blows on Each Other inside Aircraft is Viral |  WATCHಮ್ಯಾಂಚೆಸ್ಟರ್‌ನಿಂದ ಆಮ್‌ಸ್ಟರ್‌ಡ್ಯಾಮ್‌ಗೆ ಹಾರಾಟ ನಡೆಸುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕರು ಗಲಿಬಿಲಿಗೊಂಡಂತಹ ಘಟನೆ ನಡೆದಿದೆ. ವಿಮಾನದೊಳಗೆ ಒಂದು ಗುಂಪಿನ ಪ್ರಯಾಣಿಕರ ನಡುವೆ ಹೊಯ್ ಕೈ ನಡೆದಿದ್ದು, ಗುದ್ದಾಟ, ಕಿರುಚಾಟ ಶುರುವಾದವು.

ಕೆಎಲ್‌ಎಂ ವಿಮಾನವು ಡಚ್ ರಾಜಧಾನಿಯ ಶಿಪೋಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಈ ಘಟನೆ ಸಂಭವಿಸಿದೆ. ಈ ಹೋರಾಟದ ವಿಡಿಯೋವನ್ನು ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪುರುಷರ ಗುಂಪು ಪರಸ್ಪರ ಹೊಡೆದಾಟದಲ್ಲಿ ತೊಡಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಕ್ಯಾಬಿನ್‌ನಲ್ಲಿ ಇತರೆ ಪ್ರಯಾಣಿಕರು ಜಗಳವನ್ನು ಕೊನೆಗಾಣಿಸುವಂತೆ ಕೂಗುತ್ತಿದ್ದಾರೆ. ವಿಮಾನದಲ್ಲಿ ನೇಮಿಸಲಾದ ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಅನೇಕರು ಯುವಕರನ್ನು ಹಿಡಿದು ಎಳೆಯುತ್ತಾ, ಜಗಳವನ್ನು ಕೊನೆಗಾಣಿಸಲು ಪ್ರಯತ್ನಿಸಿದ್ದಾರೆ. ಇದರಿಂದ ನೂಕುನುಗ್ಗಲು ಉಂಟಾಗಿದ್ದು, ಪರಸ್ಪರ ಕೂಗಾಟದ ನಂತರ ಕಾದಾಟವನ್ನು ಅಂತ್ಯಗೊಳಿಸಲಾಯಿತು.

ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಸಂಗ್ರಹಿಸಲಾಗಿದೆ. ವರದಿಯ ಪ್ರಕಾರ, ಜನಾಂಗೀಯ ಕಾಮೆಂಟ್ ಮಾಡಿದ್ದಕ್ಕಾಗಿ ಗುಂಪು ವ್ಯಕ್ತಿಯನ್ನು ಥಳಿಸಿದೆ ಎಂದು ಹೇಳಲಾಗಿದೆ. ಇನ್ನು ಈ ಗಲಾಟೆಯಲ್ಲಿ ಒಟ್ಟು ಆರು ಮಂದಿ ಪಾಲ್ಗೊಂಡಿದ್ದು, ಅವರೆಲ್ಲರನ್ನು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

— Maya Wilkinson (@MayaWilkinsonx) May 5, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...