ಶಾರೂಕ್ ತದ್ರೂಪಿಯ ಫೋಟೋ ನೋಡಿ ದಂಗಾದ ನೆಟ್ಟಿಗರು 09-05-2022 8:05AM IST / No Comments / Posted In: Featured News, Live News, Entertainment ಇದೀಗ ವೈರಲ್ ಆಗಿರುವ ಈ ಚಿತ್ರ ನೋಡಿದ್ರೆ ನಿಮಗೆ ಯಾರ ತರಹ ಕಾಣಿಸುತ್ತದೆ..? ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ನನ್ನು ಹೋಲುತ್ತದೆ ಎಂದು ನಿಮಗನಿಸುತ್ತಿರಬಹುದು. ಆದರೆ, ಈತ ನಿಜವಾಗಿಯೂ ಶಾರುಖ್ ಖಾನ್ ಅಲ್ಲ. ಈತ ಕೂಡ ನಮ್ಮಂತೆಯೇ ಸಾಮಾನ್ಯ ವ್ಯಕ್ತಿ. ಇಬ್ಬರ ಫೋಟೋದಲ್ಲಿ ನಿಜವಾದ ಶಾರುಖ್ ಖಾನ್ ಯಾರು ಎಂಬುದು ಕಂಡುಹಿಡಿಯಲು ನಿಮಗೆ ತುಸು ಕಷ್ಟವಾಗಬಹುದು. ಹೌದು, ಇನ್ಸ್ಟಾಗ್ರಾಂನ ಹ್ಯೂಮನ್ಸ್ ಆಫ್ ಬಾಂಬೆ ಪುಟದಲ್ಲಿ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈತನ ಹೆಸರು ಇಬ್ರಾಹಿಂ ಖಾದ್ರಿ. ಈತ ಶಾರುಖ್ ಖಾನ್ ರಂತೆಯೇ ಹೋಲುವುದರಿಂದ ಖಾದ್ರಿಗೆ ಖ್ಯಾತಿ ತಂದುಕೊಟ್ಟಿದೆ. ಯೂಟ್ಯೂಬ್ನಲ್ಲಿ ಹಂಚಿಕೊಂಡ ಪೋಸ್ಟ್ ನಲ್ಲಿ, ಖಾದ್ರಿ ಅವರು ಪ್ರೌಢಾವಸ್ಥೆಗೆ ಬಂದ ನಂತರದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರ ಸ್ನೇಹಿತರು ಅವರನ್ನು ಎಸ್ಆರ್ಕೆ ಎಂದು ಕರೆಯಲು ಪ್ರಾರಂಭಿಸಿದರಂತೆ. ಬಾಲಿವುಡ್ ಸೂಪರ್ಸ್ಟಾರ್ಗೆ ಅಸಾಮಾನ್ಯ ಹೋಲಿಕೆಯನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ ಬಗ್ಗೆ ಖಾದ್ರಿ ಪೋಷಕರು ಹೆಮ್ಮೆಪಟ್ಟಿದ್ದಾರೆ. ಇನ್ನು ಈತ ಎಲ್ಲಿ ಹೋದ್ರೂ ಎಸ್ಆರ್ಕೆ ಅಭಿಮಾನಿಗಳು ಮುಗಿಬೀಳುತ್ತಾರಂತೆ..! ಹೌದು, ಒಂದು ಬಾರಿ ಖಾದ್ರಿ ತನ್ನ ಸ್ನೇಹಿತರ ಜೊತೆಗೆ ರಯೀಸ್ ಸಿನಿಮಾ ವೀಕ್ಷಿಸಲು ಚಿತ್ರಮಂದಿರಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿದ್ದ ಜನರು ನಿಜವಾಗಿಯೂ ಎಸ್ಆರ್ಕೆ ಬಂದಿದ್ದಾರೆಂದು ಮುಗಿಬಿದ್ದಿದ್ದರಂತೆ. ಅಷ್ಟೇ ಅಲ್ಲ, ಈತನ ಜೊತೆ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಪಟ್ಟಿದ್ದರಂತೆ. ಇನ್ನು ಖಾದ್ರಿ ಅವರು ಕ್ರಿಕೆಟ್ ಸ್ಟೇಡಿಯಂನಿಂದ ಹೊರಬರುವುದಕ್ಕಾಗಿ ಪೊಲೀಸರು ಯಾವ ರೀತಿಯಾಗಿ ಸಹಾಯ ಮಾಡಿದ್ರು ಎಂಬುದನ್ನು ವಿವರಿಸಿದ್ದಾರೆ. ಏಕೆಂದರೆ, ನಿಜವಾಗಿಯೂ ಎಸ್ಆರ್ಕೆ ಆಗಮಿಸಿದ್ದಾರೆಂದು ತಪ್ಪು ತಿಳಿದುಕೊಂಡ ಜನ, ಈತನನ್ನು ಸುತ್ತುವರೆದಿದ್ದಾರೆ. ಸೆಲ್ಫಿ ಪಡೆಯಲು ಮುಗಿಬಿದ್ದಿದ್ರಿಂದ ಖಾದ್ರಿ ಧರಿಸಿದ್ದ ಶರ್ಟ್ ಅನ್ನು ಬಹುತೇಕ ಹರಿದು ಹಾಕಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದ್ದು, ಸಾವಿರಾರು ಲೈಕ್ಸ್ ಗಳು, ಟನ್ಗಳಷ್ಟು ಪ್ರತಿಕ್ರಿಯೆಗಳೊಂದಿಗೆ ವೈರಲ್ ಆಗಿದೆ.