ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರದ ‘ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್’ ಫಲಕದ ಕೆಳಗೆ ಕಸದ ರಾಶಿ ಬಿದ್ದಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತೀಯ ಜನತಾ ಪಾರ್ಟಿ ನಾಯಕ, ಪಶ್ಚಿಮ ದೆಹಲಿಯ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ಗುರುವಾರ ಟ್ವಿಟರ್‌ನಲ್ಲಿ ಈ ಫೋಟೋ ಶೇರ್ ಮಾಡಿದ್ದಾರೆ.
“ಕೇಜ್ರಿವಾಲ್ ಸರ್ಕಾರವು ದೆಹಲಿಯಲ್ಲಿ 1,000 ಮೊಹಲ್ಲಾ ಕ್ಲಿನಿಕ್‌ಗಳನ್ನು ನಿರ್ಮಿಸಿದೆ, ಅವುಗಳಲ್ಲಿ ಇದೂ ಒಂದು” ಎಂಬ ಶೀರ್ಷಿಕೆಯೊಂದಿಗೆ ಅವರು ಇದನ್ನು ಪೋಸ್ಟ್ ಮಾಡಿದ್ದರು. ಇದು 1,900 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದ್ದು, 6,700 ಕ್ಕೂ ಹೆಚ್ಚು ‘ಲೈಕ್’ ಪಡೆದುಕೊಂಡಿದೆ.
ಆಮ್ ಆದ್ಮಿ ಪಾರ್ಟಿ (ಎಎಪಿ) ಸರ್ಕಾರವು 2015 ರಲ್ಲಿ ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್ ಅಥವಾ ಸಮುದಾಯ ಚಿಕಿತ್ಸಾಲಯಗಳನ್ನು “ನಗರ ಪ್ರದೇಶಗಳಲ್ಲಿ ಹಿಂದುಳಿದ ಜನರಿಗೆ ಅಗತ್ಯ ಮೂಲಭೂತ ಆರೋಗ್ಯ ಸೇವೆ ಒದಗಿಸುವುದಕ್ಕಾಗಿ ಪರಿಚಯಿಸಿದೆ. ಈ ಫೋಟೋವನ್ನು ಪರ್ವೇಶ್ ಹೊರತುಪಡಿಸಿ, ಜಾರ್ಖಂಡ್‌ನ ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕೂಡ ಶೇರ್ ಮಾಡಿದ್ದಾರೆ.
BIG NEWS: ಭೀಕರ ರಸ್ತೆ ಅಪಘಾತ; ನಟಿ ಸುನೇತ್ರಾ ಪಂಡಿತ್ ಗೆ ಗಂಭೀರ ಗಾಯ
ಫ್ಯಾಕ್ಟ್ ಚೆಕ್: ಫೋಟೋದಲ್ಲಿರುವ ಸೈನ್‌ಬೋರ್ಡ್‌ನಲ್ಲಿ ‘ಆಮ್ ಆದ್ಮಿ ಮೊಹಲ್ಲಾ ಕ್ಲಿನಿಕ್, ನೀತಿ ವಿಹಾರ್, ಕಿರಾರಿ, ದೆಹಲಿ-110086’ ಎಂದು ಬರೆಯಲಾಗಿದೆ. ಫೋಟೋದಲ್ಲಿರುವ ವಿಚಾರ ಸತ್ಯವೇ ಆಗಿದೆ. ಆದರೆ, ಮೊಹಲ್ಲಾ ಕ್ಲಿನಿಕ್ ಮಾತ್ರ ಎಲ್ಲಿದೆ ಎಂಬುದು ತಿಳಿದಿಲ್ಲ. ಇದಕ್ಕೆ ದೆಹಲಿ ಸರ್ಕಾರದ ವಿಶೇಷ ಕರ್ತವ್ಯ (OSD) ಅಧಿಕಾರಿ ಶಲೀನ್ ಮಿತ್ರಾ ಟ್ವೀಟ್ ಮೂಲಕವೇ ಉತ್ತರಿಸಿದ್ದು, ವಿಡಿಯೋ ಅಪ್ಲೋಡ್ ಮಾಡಿದ್ದಾರೆ.