ಮದುವೆ ಜೀವನದಲ್ಲಿ ಬರುವಂತಹ ಮಹತ್ತರ ಘಟ್ಟ. ಅರೆಂಜ್ ಮ್ಯಾರೇಜ್ ಆಗಿರಬಹುದು ಇಲ್ಲಾ, ಲವ್ ಮ್ಯಾರೇಜ್ ಆಗಿರಬಹುದು. ಸಂಗಾತಿ ಜೊತೆ ಮುಂದಿನ ಭವಿಷ್ಯಕ್ಕೆ ಮೊದಲ ಹೆಜ್ಜೆ ಇಡುವ ಘಳಿಗೆ ಅದು. ಆ ಅಪರೂಪದ ಘಳಿಗೆಯ ಒಂದೊಂದು ಕ್ಷಣವನ್ನ ಫೋಟೋಗ್ರಾಫರ್ ತನ್ನ ಕ್ಯಾಮರಾದಲ್ಲಿ ಸೆರೆಹಿಡಿಯುತ್ತಾನೆ. ಆ ಫೋಟೋಗಳೇ ಜೀವನ ಪರ್ಯಂತ ಜೊತೆಗಿರುವ ನೆನಪುಗಳು. ಹೀಗೆ ಮದುವೆಯೊಂದರಲ್ಲಿ ಮದುಮಕ್ಕಳ ಫೋಟೋ ಶೂಟ್ ಮಾಡುತ್ತಿರುವಾಗಲೇ ಆತನಿಗೆ ಆದ ಭಯಾನಕ ಅನುಭವಕ್ಕೆ ಬೆಚ್ಚಿಬಿದ್ದಿದ್ದಾನೆ. ಅದೇ ನೋಡಿ ಈ ವಿಡಿಯೋ…
ಸೊಶಿಯಲ್ ಮಿಡಿಯಾದಲ್ಲಿ ಇತ್ತಿಚೆಗೆ ಸಖತ್ ವೈರಲ್ ಆಗ್ತಿರೋ ವಿಡಿಯೋ ಇದು. ಈ ವಿಡಿಯೋ ನೋಡಿ ನೆಟ್ಟಿಗರು ಫುಲ್ ಎಂಜಾಯ್ ಮಾಡ್ತಿದ್ದಾರೆ. ಅಸಲಿಗೆ ಅರೆಂಜ್ ಮ್ಯಾರೇಜ್ ಆದ್ರೆ ಅದರ ಪರಿಣಾಮ ಹೇಗೆಲ್ಲ ಇರುತ್ತೆ ಅಂತ ಕಾಮೆಂಟ್ ಮೇಲೆ ಕಾಮೆಂಟ್ ಹಾಕ್ತಿದ್ದಾರೆ. ಅಷ್ಟೆ ಅಲ್ಲ ಈ ವಿಡಿಯೋಗೆ ವೆರೈಟಿ ವೆರೈಟಿ ಹಾಡುಗಳನ್ನ ಹಾಕಿ, ಮನಸ್ಸಿಲ್ಲದ ಮನಸ್ಸಿನಿಂದ ಮದುವೆ ಆದರೆ ಅದರ ಸೈಡ್ ಎಫೆಕ್ಟ್ ಇದು ಅಂತ ಕಾಮಿಡಿ ಮಾಡ್ತಿದ್ದಾರೆ.
ನೀವು ಸಹ ಈ ವಿಡಿಯೋದಲ್ಲಿ ಗಮನಿಸಬಹುದು. ಮದುಮಗಳು ಮದುಮಗನಿಗೆ ಹಾರ ಹೇಗೆ ಹಾಕಿದ್ದು ಅಂತ. ಅಷ್ಟೆ ಅಲ್ಲ ಹಾಕಿದ್ದ ನಂತರ ಆಕೆ ಮೈಮೇಲೆ ದೆವ್ವ ಬಂದ ರೀತಿಯಲ್ಲಿ ಫೋಟೋಗ್ರಾಫರ್ ಗೆ ಕೊಟ್ಟ ಲುಕ್ ನೋಡ್ತಿದ್ರೆ ಎಂಥವರೂ ಕೂಡಾ ಬೆಚ್ಚಿಬೀಳೋ ಹಾಗಿತ್ತು. ಪುಣ್ಯಾತ್ಮ ಫೋಟೋಗ್ರಾಫರ್. ಅದ್ಹೇಗೆ ಮದುವೆ ಫೋಟೋಶೂಟ್ ಮಗಿಸಿದ್ನೋ ಏನೋ..?
https://youtu.be/1pVdD8o4rHY