ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಮಧ್ಯಾಹ್ನ 3 ರಿಂದ ರಾತ್ರಿ 9 ಗಂಟೆಯವರೆಗೆ ಕೆಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಕಾವೇರಿ ನೀರು ಪೂರೈಕೆ ಯೋಜನೆಯ 3 ನೇ ಹಂತದ ಮುಖ್ಯ ಪೈಪ್ ಲೈನ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದ ರಾತ್ರಿವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ಗಾಂಧಿನಗರ, ವಸಂತನಗರ, ಹೈಗ್ರೌಂಡ್ಸ್, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಸಂಪಂಗಿರಾಮ ನಗರ, ಟೌನ್ ಹಾಲ್, ಲಾಲ್ ಬಾಗ್ ರಸ್ತೆ, ಕಬ್ಬನ್ ಪೇಟೆ, ಸುಣಕಲ್ ಪೇಟೆ, ಕುಂಬಾರ ಪೇಟೆ, ಮಲ್ಲೇಶ್ವರಂ, ಕುಮಾರಪಾರ್ಕ್, ಜಯಮಹಲ್, ಶೇಷಾದ್ರಿಪುರಂ, ಸದಾಶಿವ ನಗರ, ಪ್ಯಾಲೇಸ್ ಗುಟ್ಟಹಳ್ಳಿ, ಸಂಜಯನಗರ, ಡಾಲರ್ಸ್ ಕಾಲೋನಿ, ಬ್ಯಾಟರಾಯನಪುರ, ಜೆಸಿ ನಗರ, ದೂಪನಹಳ್ಳಿ, ಎಚ್ಎಎಲ್ 3 ನೇ ಹಂತ, ಕೇಂಬ್ರಿಡ್ಜ್ ಲೇಔಟ್, ಗಂಗಾನಗರ, ಆರ್.ಟಿ.ನಗರ, ಕಾವಲ್ ಬೈರಸಂದ್ರ, ಡಿಜೆ ಹಳ್ಳಿ, ಹಲಸೂರು, ಎಂವಿ ಗಾರ್ಡನ್, ಮರ್ಫಿ ಟೌನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.
ನೀರು ಪೂರೈಕೆ ವ್ಯತ್ಯಯವಾಗಲಿರುವ ಪ್ರದೇಶಗಳ ವಿವರಗಳನ್ನು ಬೆಂಗಳೂರು ಜಲಮಂಡಳಿಯ ವೆಬ್ ಸೈಟ್ bwssb.karnataka.gov.in ನಲ್ಲಿ ಪ್ರಕಟಿಸಲಾಗಿದೆ.