ತುಮಕೂರು: ಬಿಜೆಪಿ ಶಾಸಕ ಯತ್ನಾಳ್ ಪಕ್ಷದ ವಿರುದ್ಧ ಹೇಳಿಕೆ ನೀಡಿರುವುದರಿಂದ ಪಕ್ಷಕ್ಕೆ ನಿಜಕ್ಕೂ ಮುಜುಗರ ತರುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಗೃಹ ಸಚಿವರು, ಸಿಎಂ ಹುದ್ದೆಗೆ 2,500 ಕೋಟಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಪಕ್ಷದಲ್ಲಿ ಸಹಜವಾಗಿ ಇದೆಲ್ಲವೂ ಇರುತ್ತದೆ ಎಂದು ಯತ್ನಾಳ್ ಹೇಳಿರಬಹುದು. ನಿರ್ದಿಷ್ಟವಾಗಿ ಇದೇ ಪಕ್ಷ ಎಂದು ಉಲ್ಲೇಖಿಸಿಲ್ಲ. ಆದರೆ ಪಕ್ಷದ ವಿರುದ್ಧವೇ ಅವರು ಹೇಳಿದ್ದರೆ ಅದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ ಎಂದರು.
ಪಕ್ಷದ ವಿರುದ್ಧ ಮಾತನಾಡಿದ್ದರೆ ಯತ್ನಾಳ್ ಅವರನ್ನು ನಾಯಕರು ಕರೆದು ಚರ್ಚಿಸುತ್ತಾರೆ. ಅವರು ಯಾವ ಭಾವನೆಯಿಂದ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಿದರು.