ಹಸಿ ತೆಂಗಿನಕಾಯಿ ಏಕೆ ಸೇವಿಸಬೇಕು….? 07-05-2022 1:08PM IST / No Comments / Posted In: Latest News, Health, Live News, Life Style ತೆಂಗಿನಕಾಯಿಯನ್ನು ದಿನನಿತ್ಯದ ಅಡುಗೆಗೆ ನಾವೆಲ್ಲಾ ಬಳಸುತ್ತೇವೆ. ತೆಂಗಿನತುರಿ ಯನ್ನು ಹಸಿಯಾಗಿಯೂ ನಿಯಮಿತವಾಗಿ ಸೇವಿಸುವುದರಿಂದ ಹಲವು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಬಹುದು. ಹಸಿ ತೆಂಗಿನ ತಿರುಳಲ್ಲಿ ತಾಮ್ರ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕಬ್ಬಿಣ, ಸತು ಮೊದಲಾದ ಪೋಷಕಾಂಶಗಳಿವೆ. ತೆಂಗಿನಕಾಯಿ ತೂಕವನ್ನು ಇಳಿಸಲು ನೆರವಾಗುತ್ತದೆ. ಇದು ಹಸಿವನ್ನು ನಿಗ್ರಹಿಸುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ. ಹಸಿ ತೆಂಗಿನಕಾಯಿ ಸೇವನೆಯಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ. ಹೊಟ್ಟೆಯ ಸಮಸ್ಯೆಗಳು, ಮಲಬದ್ಧತೆ ಮೊದಲಾದ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತದೆ. ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುವಷ್ಟೇ ಲಾಭ ಹಸಿ ತೆಂಗಿನಕಾಯಿ ತಿನ್ನುವುದರಿಂದಲೂ ಪಡೆಯಬಹುದು. ಕೂದಲಿನ ಹಲವು ಸಮಸ್ಯೆಗಳಿಗೆ ಇದು ರಾಮಬಾಣ. ತ್ವಚೆಗೂ ಇದು ನೈಸರ್ಗಿಕ ಹೊಳಪನ್ನು ನೀಡುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ಇದನ್ನು ಉಪ್ಪಿಟ್ಟು, ಸಲಾಡ್ ಮೊದಲಾದ ತಿನಿಸುಗಳ ಮೇಲೆ ಹಸಿಯಾಗಿಯೇ ಉದುರಿಸಿ ತಿನ್ನಬಹುದು.