alex Certify ಅದೃಷ್ಟ ಅಂದ್ರೆ ಇದೇ ಅಲ್ವಾ: 30 ವರ್ಷಗಳವರೆಗೆ ಈ ಜೋಡಿಗೆ ಪ್ರತಿ ತಿಂಗಳು ಬರುತ್ತೆ 10 ಲಕ್ಷ ರೂ. ಲಾಟರಿ ಹಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದೃಷ್ಟ ಅಂದ್ರೆ ಇದೇ ಅಲ್ವಾ: 30 ವರ್ಷಗಳವರೆಗೆ ಈ ಜೋಡಿಗೆ ಪ್ರತಿ ತಿಂಗಳು ಬರುತ್ತೆ 10 ಲಕ್ಷ ರೂ. ಲಾಟರಿ ಹಣ

ಸೆಟ್ ಫಾರ್ ಲೈಫ್ ಅನ್ನೊ ಯೋಜನೆಯ ಅಪರೂಪದ ಲಾಟರಿ ಸ್ಕೀಮ್ ಅದು. ಯುಕೆಯಲ್ಲಿ ಆಗಾಗ ಈ ಲಾಟರಿ ಆಟ ಆಡಲಾಗುತ್ತೆ. ಈ ಲಾಟರಿಯನ್ನ ಲಾರಾಹಾಲ್ ಮತ್ತು ಕಿರ್ಕ್ ಸ್ಟೀವನ್ಸ್ ಅವರು ಕಳೆದ ವರ್ಷ ಮಾರ್ಚ್ 1, 2021ರಲ್ಲಿ ಗೆದ್ದಿದ್ದಾರೆ.

ಈ ಲಾಟರಿಯಲ್ಲಿ ಗೆದ್ದವರಿಗೆ ಮುಂದಿನ 30 ವರ್ಷಗಳವರೆಗೆ ಪ್ರತಿ ತಿಂಗಳು 10,000 ಸಾವಿರ ಪೌಂಡ್ ಕೊಡಲಾಗುತ್ತೆ. 10,000 ಪೌಂಡ್ ಅಂದರೆ 9 ಲಕ್ಷ 50 ಸಾವಿರ‌ ರೂಪಾಯಿ, ಅಂದ್ರೆ, ಹೆಚ್ಚು ಕಡಿಮೆ 10 ಲಕ್ಷ. ಇಷ್ಟು ದೊಡ್ಡ ಮೊತ್ತ, ಈ ಜೋಡಿಯ ಅಕೌಂಟ್‌ಗೆ ಲಾಟರಿ ಕಂಪನಿ ಹಣ ಡಿಪಾಸಿಟ್ ಮಾಡುತ್ತೆ. ಇದಕ್ಕೆ ಅಂತಾರೆ ನೋಡಿ ಕಿಸ್ಮತ್ ಖುಲಾಯಿಸೋದು ಅಂತ.

ಇಲ್ಲಿ ಗಮನಿಸಬೇಕಾಗಿರೋ ಇನ್ನೊಂದು ವಿಚಾರ ಏನಂದ್ರೆ, ಈ ಲಾಟರಿಯನ್ನ ಪ್ರತಿ ವರ್ಷ ಇಲ್ಲಿ ಆಡಲಾಗುತ್ತೆ ಆದರೆ ಇಲ್ಲಿಯ ತನಕ ಅದೃಷ್ಟ ಯಾರ ಕೈ ಹಿಡಿದಿರಲಿಲ್ಲ. ಆದರೆ ಈ ಬಾರಿ ಲಾರಾಹಾಲ್ ಮತ್ತು ಕಿರ್ಕ್ ಸ್ಟೀವನ್ಸ್ ಅವರ ಕೈ ಹಿಡಿದಿದೆ. ಈ ಜೋಡಿ 2019ರಿಂದ ಈ ಲಾಟರಿ ಗೇಮ್‌ ತಪ್ಪದೇ ಆಡುತ್ತಲೇ ಬಂದವರು. ಪ್ರತಿಬಾರಿ ಗೆಲ್ಲುವ ಇರಾದೆಯಿಂದ ಆಡಿದ್ದರೂ ಸೋತಿದ್ದೇ ಹೆಚ್ಚು. ಆದರೆ ಈ ಬಾರಿ ಡೈರೆಕ್ಟ್ ಬಂಪರ್ ಲಾಟರಿ ಹೊಡೆದಿದ್ದಾರೆ.

ಪ್ರತಿ ತಿಂಗಳು ಕೈಗೆ ಏನಿಲ್ಲ ಅಂದರೂ 10 ಸಾವಿರ ಪೌಂಡ್ ಅಂದರೆ, 10 ಲಕ್ಷ ಬರೋದು ಗ್ಯಾರಂಟಿ ಅಂದ ಮೇಲೆ ಯಾರಿಗೆ ಖುಷಿಯಾಗೋಲ್ಲ ಹೇಳಿ. ಈಗ ಲಾರಾಹಾಲ್ ಮತ್ತು ಕಿರ್ಕ್ ಸ್ಟೀವನ್ಸ್ ಪರಿಸ್ಥಿತಿಯೂ ಹಾಗೆಯೇ ಇದೆ. ಈಗ ಅವರು ಲಾಟರಿ ಹೊಡೆದಾಕ್ಷಣ ಎಷ್ಟು ಖುಷಿಯಿಂದ ಸಂಭ್ರಮಿಸಿದ್ದರು ಅನ್ನೊ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಈ ಬಂಪರ್ ಲಾಟರಿ ಹೊಡೆದಿದ್ದೇ ತಡ, ಲಾರಾಹಾಲ್ ಈಗ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಜೊತೆಗೆ ಕಿರ್ಕ್ ಸ್ಟೀವನ್ಸ್ ಈ ಹಿಂದೆ ಮಾರಾಟ ಮಾಡಿದ್ದ ಮನೆಯನ್ನ ಮತ್ತೆ ಖರಿದೀಸಿದ್ದಾರೆ. ಒಟ್ಟಿನಲ್ಲಿ ಲಾಟರಿಯೊಂದು ಒಂದು ಜೋಡಿಯ ಬದುಕನ್ನೇ ಬದಲಾಯಿಸಿದ್ದಂತೂ ಸುಳ್ಳಲ್ಲ..!

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...