alex Certify ‘ಬೆಂಬಲ ಬೆಲೆ ಯೋಜನೆ’ಯಡಿ ನೋಂದಣಿ ಮಾಡಿಸಲು ಹೋದ ರಾಗಿ ಬೆಳೆದ ರೈತರಿಗೆ ನಿರಾಸೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೆಂಬಲ ಬೆಲೆ ಯೋಜನೆ’ಯಡಿ ನೋಂದಣಿ ಮಾಡಿಸಲು ಹೋದ ರಾಗಿ ಬೆಳೆದ ರೈತರಿಗೆ ನಿರಾಸೆ

ಬೆಂಬಲ ಬೆಲೆ ಯೋಜನೆಯಡಿ 2 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಖರೀದಿಸುವುದಾಗಿ ಘೋಷಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶುಕ್ರವಾರದಿಂದಲೇ ಇದರ ನೋಂದಣಿ ಕಾರ್ಯ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದರು.

ಹೀಗಾಗಿ ನೋಂದಣಿ ಮಾಡಿಸಲು ಶುಕ್ರವಾರದಂದು ಖರೀದಿ ಕೇಂದ್ರಗಳಿಗೆ ತೆರಳಿದ್ದ ರೈತರು ನಿರಾಸೆಗೊಂಡಿದ್ದಾರೆ. ಸರ್ಕಾರದಿಂದ ಈ ಕುರಿತು ಯಾವುದೇ ಅಧಿಕೃತ ಆದೇಶ ಬಾರದಿರುವ ಕಾರಣ ಅಧಿಕಾರಿಗಳು ನೋಂದಣಿ ಮಾಡಿಕೊಳ್ಳಲು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಬಳಿಕ ರೈತರಿಗೆ ಮನವರಿಕೆ ಮಾಡಿಕೊಟ್ಟ ಅಧಿಕಾರಿಗಳು ಈ ಕುರಿತ ಆದೇಶ ಸದ್ಯದಲ್ಲೇ ಹೊರಬೀಳಬಹುದು. ಬಳಿಕ ಅಧಿಕೃತವಾಗಿ ನೋಂದಣಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರಲ್ಲದೆ, ನೋಂದಣಿಗಾಗಿ ಬಂದಿದ್ದ ರಾಗಿ ಬೆಳೆಗಾರರ ಮಾಹಿತಿಯನ್ನು ಲಿಖಿತವಾಗಿ ದಾಖಲಿಸಿಕೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...