ಇತ್ತೀಚೆಗೆ ನೃತ್ಯ ಪ್ರದರ್ಶನಗಳಿಲ್ಲದೆ ಭಾರತೀಯ ವಿವಾಹ ಸಮಾರಂಭವು ಅಪೂರ್ಣವೆಂದೆನಿಸುತ್ತದೆ. ಇನ್ನು ಮದುವೆ ಮೆರವಣಿಗೆ ವೇಳೆ ಬಾರಾತಿಗಳ ಡೋಲ್ ನ ಬಡಿತಕ್ಕೆ ಉತ್ಸಾಹದಿಂದ ನೃತ್ಯ ಮಾಡುವುದನ್ನು ಕಾಣಬಹುದು. ಇದೀಗ ಅಂತಹ ವಿವಾಹದ ಬಾರಾತ್ ಡ್ಯಾನ್ಸ್ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ.
ಮೆರವಣಿಗೆ ವೇಳೆ ವರ ಮಾಡಿರುವ ನೃತ್ಯವು ಜನರ ಮನಸ್ಸನ್ನು ಗೆದ್ದಿದೆ. ವರನು ತನ್ನ ನಯವಾದ ನಡೆಗಳಿಂದ ಕಾರ್ಯಕ್ರಮವನ್ನು ಕದ್ದಿದ್ದಾನೆ. ವರ ಕುದುರೆಯಿಂದ ಕೆಳಗಿಳಿದು ತನ್ನ ಮದುವೆಯ ಮೆರವಣಿಗೆಯ ಮುಖಾಂತರ ವೇದಿಕೆಯತ್ತ ಧಾವಿಸುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ವರ ಕುದುರೆಯಿಳಿದು ಬರುತ್ತಿದ್ದಂತೆ ಆತನ ಸ್ನೇಹಿತರು ಅವನಿಗಾಗಿ ಹುರಿದುಂಬಿಸುತ್ತಿದ್ದಾರೆ. ಈ ವೇಳೆ ವರ ನಟ ಗೋವಿಂದ ಅವರ ಹಿಟ್ ಹಾಡು ಆಯಿ ಅಬ್ ಆಂಟಿ ಕಿ ಬಾರಿ ಹಾಡಿಗೆ ತಕ್ಕಂತೆ ನೃತ್ಯ ಮಾಡುತ್ತಾನೆ. ಈ ವೇಳೆ ಬಾರತಿಗಳು ಶಿಳ್ಳೆ ಹೊಡೆಯುತ್ತಾ, ಚಪ್ಪಾಳೆ ತಟ್ಟುತ್ತಾ, ವರನ ನೃತ್ಯವನ್ನು ಆನಂದಿಸಿದ್ದಾರೆ.
ಸೈಕೋ ಬಿಹಾರಿ ಎಂಬ ಹೆಸರಿನ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಧೂಳೆಬ್ಬಿಸಿದೆ. ನೆಟ್ಟಿಗರು ವರನ ನೃತ್ಯವನ್ನು ಇಷ್ಟಪಟ್ಟಿದ್ದಾರೆ.