ಕಲಬುರ್ಗಿ; ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮದ ಕಿಂಗ್ ಪಿನ್ ಹೆಸರು ಹೇಳಿದರೆ ಸರ್ಕಾರವೇ ಉರುಳುತ್ತೆ ಹಾಗಾಗಿ ಹೆಸರು ಹೇಳಲು ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಕುಮಾರಸ್ವಾಮಿಗೆ ಕಿಂಗ್ ಪಿನ್ ಯಾರೆಂದು ಗೊತ್ತಿದ್ದರೆ ಹೇಳಲಿ ಸರ್ಕಾರ ಬಿದ್ದರೂ ಪರವಾಗಿಲ್ಲ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಹೆಚ್.ಡಿ.ಕುಮಾರಸ್ವಾಮಿಯವರು ಬರಿ ಹಿಟ್ ಆಂಡ್ ರನ್ ಮಾಡಬಾರದು. ಅಕ್ರಮದ ಕಿಂಗ್ ಪಿನ್ ಯಾರೆಂದು ಗೊತ್ತಿದ್ದರೆ ಹೆಸರು ಹೇಳಲಿ. ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಸರ್ಕಾರ ಉರುಳಿದರೂ ಪರವಾಗಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರು.
ನೆಚ್ಚಿನ ಗಿಳಿಯನ್ನು ಕಳೆದುಕೊಂಡು ಪರಿತಪಿಸುತ್ತಿದೆ ಈ ಕುಟುಂಬ; ಹುಡುಕಿಕೊಟ್ಟವರಿಗೆ ಸಿಗಲಿದೆ ನಗದು ಬಹುಮಾನ
ಇದೇ ವೇಳೆ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ ಗೃಹ ಸಚಿವರು, ಪಿ ಎಸ್ ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಪ್ರಿಯಾಂಕ್ ಖರ್ಗೆ ಬೆಂಬಲಿಗರೇ ಇದ್ದಾರೆ. ಹೀಗಿದ್ದರೂ ಖರ್ಗೆ ಉತ್ತರಿಸಲು ಬರುತ್ತಿಲ್ಲ. ಸಿಐಡಿ 3 ಬಾರಿ ನೋಟೀಸ್ ಕೊಟ್ಟರು ವಿಚಾರಣೆಗೆ ಹಾಜರಾಗುತ್ತಿಲ್ಲ. ಪ್ರಿಯಾಂಕ್ ಖರ್ಗೆ ಮಂತ್ರಿ ಕೂಡ ಆಗಿದ್ದರು. ಸರ್ಕಾರಕ್ಕಿಂತ ಹೆಚ್ಚಿನ ಮಾಹಿತಿ ಇದೆ ಅಂದಿದ್ರು. ಅಂದಮೇಲೆ ದಾಖಲೆಗಳನ್ನು ಸಿಐಡಿಗೆ ತಂದುಕೊಡಲಿ ಎಂದು ಹೇಳಿದರು.