ಬೆಳಗಾವಿ: ನಮ್ಮ ಹೋರಾಟದಿಂದ ಸಂಪುಟದಲ್ಲಿ ಪಂಚಮಸಾಲಿ ಸಮುದಾಯದ ಮೂವರಿಗೆ ಸಚಿವ ಸ್ಥಾನ ಸಿಕ್ಕಿದೆ. ಮೊದಲು ಯಡಿಯೂರಪ್ಪ ಒಬ್ಬರನ್ನು ಮಂತ್ರಿ ಮಾಡಲು ಒದ್ದಾಡುತ್ತಿದ್ದರು ಎಂದು ರಾಮದುರ್ಗದಲ್ಲಿ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಒಂದು ಕ್ಯಾಶ್ ಕ್ಯಾಂಡಿಡೇಟ್ ಐತೆ. ಅದನ್ನು ಮಾಡಲೇಬೇಕಾಗಿತ್ತು ಎಂದು ನಿರಾಣಿಗೆ ಪರೋಕ್ಷವಾಗಿ ಕ್ಯಾಶ್ ಕ್ಯಾಂಡಿಡೇಟ್ ಎಂದು ಹೇಳಿ ಟೀಕಿಸಿದ್ದಾರೆ.
ಸಿ.ಸಿ. ಪಾಟೀಲ್ ಪಾಪ ಸಿಎಂ ಬೊಮ್ಮಾಯಿಗೆ ಸ್ನೇಹಿತ. ಅದಕ್ಕೆ ಆಯ್ತು. ಕೆಲವರು 50 ಕೋಟಿ, 100 ಕೋಟಿ ಕೊಟ್ಟು ಮಂತ್ರಿಯಾಗುತ್ತಾರೆ. ಬಾಯಿ ತೆಗೆದು ಕಾಯುತ್ತಾರೆ ದುಡ್ಡು ಪಡೆದು ಮಂತ್ರಿಯಾಗುತ್ತಾರೆ. ನನ್ನನ್ನು ಸೋಲಿಸಲು ನಮ್ಮವರೇ ಅಭ್ಯರ್ಥಿ ಕಣಕ್ಕಿಳಿಸಿದ್ದರು ಎಂದು ಹೇಳಿದ್ದಾರೆ.
ಸಿಎಂ ಸ್ಥಾನದ ಬಗ್ಗೆಯೂ ಹೇಳಿದ ಯತ್ನಾಳ್, ನಿಮ್ಮನ್ನು ಮುಖ್ಯಮಂತ್ರಿ ಮಾಡ್ತೇವೆ 2500 ಕೋಟಿ ರೂ. ಕೊಡಿ ಎಂದು ದೆಹಲಿಯಿಂದ ಬಂದಿದ್ದ ಕೆಲವರು ನನಗೆ ಕೇಳಿದ್ದರು ಎಂದರು.