ಈ ಸ್ಮಾರ್ಟ್ ಫೋನ್ ಗಳು ಬಂದ ಹೊಸತರಲ್ಲಿ ಸ್ವೈಪ್ ಮಾಡಿ ಅನ್ಲಾಕ್ ಮಾಡುವುದೇ ಒಂದು ವಿನೋದವಾಗಿತ್ತು. ನಂತರದಲ್ಲಿ ಫಿಂಗರ್ ಪ್ರಿಂಟ್, ಐರಿಶ್, ಫೇಸ್ ಫೈಂಡರ್, ಪಾಸ್ವರ್ಡ್ ಹೀಗೆ ಹಲವು ಬಗೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ಅನ್ಲಾಕ್ ಮಾಡುವ ವಿಧಾನಗಳು ಬಂದವು.
ಆದರೆ, ಇಲ್ಲೊಬ್ಬ ಮಹಿಳೆ ತನ್ನ ಎಂಜಲಿನಿಂದ ಐಫೋನ್ ಅನ್ನು ಅನ್ಲಾಕ್ ಮಾಡುತ್ತಿದ್ದಾಳೆ. ಹೌದು ಇದು ವಿಲಕ್ಷಣ ಎನಿಸಿದರೂ ನಂಬಲೇಬೇಕಾದ ವಿಚಾರ.
ಈಕೆ ತನ್ನ ಎಂಜಲಿನಿಂದ ಫೋನ್ ಅನ್ಲಾಕ್ ಮಾಡುತ್ತಿರುವ ವಿಡಿಯೋವನ್ನು ಕಂಡ ನೆಟ್ಟಿಗರಿಗೆ ದಂಗು ಬಡಿದಿದೆ. ಪ್ರಪಂಚದಲ್ಲಿ ಇಂತಹ ಜನರೂ ಇರುತ್ತಾರೆಯೇ? ಎಂದು ಹುಬ್ಬೇರಿಸಿದ್ದಾರೆ.
ಈಕೆ ತನ್ನ ಐಫೋನ್ ಅನ್ನು ಅನ್ಲಾಕ್ ಮಾಡಲು ಆರು ಬಾರಿ ಫೋನಿನ ಸ್ಕ್ರೀನ್ ಮೇಲೆ ಉಗಿಯುತ್ತಾಳೆ. ಅಂದರೆ, ಸ್ಕೀನ್ ಮೇಲೆ ಬರುವ ನಂಬರ್ ಗಳ ಮೇಲೆ ಎಂಜಲನ್ನು ಹಾಕುತ್ತಾಳೆ. ಕೂಡಲೇ ಫೋನ್ ಅನ್ಲಾಕ್ ಆಗುತ್ತದೆ!
BIG BREAKING: ಒಂದೇ ದಿನದಲ್ಲಿ 3,545 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ದೃಢ; 19,688 ಸಕ್ರಿಯ ಪ್ರಕರಣ ದಾಖಲು
ಮಿಯಾಮಿ ನಗರದ ಮಿಲಾ ಮೊನೆಟ್ ಎಂಬ ಈ ವಿಚಿತ್ರ ಮಹಿಳೆಯ ವಿಲಕ್ಷಣ ಕೌಶಲ್ಯವನ್ನು ವ್ಯಕ್ತಿಯೊಬ್ಬರು ಸೆರೆ ಹಿಡಿದು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಈಕೆ ಪಬ್ ವೊಂದರ ಎದುರಿನಲ್ಲಿ ತನ್ನ ಕೌಶಲ್ಯವನ್ನು ಪ್ರದರ್ಶಿಸಿದ್ದಾಳೆ. ಇದನ್ನು ಕಂಡ ಸಾರ್ವಜನಿಕರು ಆಶ್ಚರ್ಯಚಕಿತರಾಗಿದ್ದಲ್ಲದೇ, ಕೆಲವರು ಅಸಹ್ಯಪಟ್ಟುಕೊಂಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಲಾರಂಭಿಸಿದ್ದಾರೆ. ಬಹುಶಃ ಆಕೆಯ ಎಂಜಲು ಇತರೆ ಸಂಬಂಧಗಳಿಗಿಂತ ಹೆಚ್ಚು ಶಕ್ತಿಯುತವಾಗಿದೆ ಎಂದು ಉದ್ಘಾರ ಎಳೆದಿದ್ದಾರೆ. ಇದೊಂದು ಹೊಸ ಬಗೆಯ ಬಯೋಮೆಟ್ರಿಕ್ ಐಡೆಂಟಿಫಿಕೇಶನ್ ಎಂದು ಒಬ್ಬರು ಹೇಳಿದ್ದರೆ, ಈಕೆಯ ಕೌಶಲ್ಯವನ್ನು ನೋಡಿದ ನಂತರ ನಾವು ಇನ್ನೊಬ್ಬರ ಫೋನ್ ಅನ್ನು ಮುಟ್ಟುವುದು ಕಷ್ಟವಾಗಿದೆ ಎಂದು ಕೆಲವರು ಹೇಳಿದ್ದಾರೆ.