alex Certify ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯನ್ನು ಬಾಗಿಲು ಒಡೆದು ರಕ್ಷಿಸಿದ ಪೊಲೀಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯನ್ನು ಬಾಗಿಲು ಒಡೆದು ರಕ್ಷಿಸಿದ ಪೊಲೀಸರು

ನೋಯ್ಡಾ: ಗಂಡ-ಹೆಂಡತಿ ಜಗಳ ಉಂಡು ಮಲಗೋ ತನಕ ಅನ್ನೊ ಮಾತಿದೆ. ಆದರೆ ಇಲ್ಲಿ ಉಂಡು ಮಲಗೋ ತನಕ ಅಲ್ಲ ಆತ್ಮಹತ್ಯೆಯ ತನಕ ಬಂದು ತಲುಪಿದೆ. ಅದೃಷ್ಟವಶಾತ್ ಆತ್ಮಹತ್ಯೆಗೆ ಪ್ರಯತ್ನಿಸಿದವರು ಈಗ ಸೇಫ್ ಆಗಿದ್ದಾರೆ.

ಅಸಲಿಗೆ ಈ ಘಟನೆ ನಡೆದಿದ್ದು, ನೋಯ್ಡಾದ ಗೌರ್ ಸಿಟಿ-2, 12ನೇ ಅವೆನ್ಯೂ ಸೊಸೈಟಿ ಎಂಬಲ್ಲಿ. ಇಲ್ಲಿ ಕಳೆದ ಎರಡು ದಿನ ಹಿಂದೆ ಗಂಡ-ಹೆಂಡತಿ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ಗಂಡ ಮನೆಯನ್ನೇ ಬಿಟ್ಟು ಹೋಗಿದ್ದಾನೆ. ಇದರಿಂದ ನೊಂದ ಹೆಂಡತಿ, ಆತ್ಮಹತ್ಯೆ ಮಾಡಿಕೊಳ್ಳೊದಕ್ಕೆ ನಿರ್ಧಾರ ಮಾಡಿದ್ದಾಳೆ.

ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿ: ಪ್ರತಿ ಜಿಲ್ಲೆಗಳಲ್ಲಿ CNG ಬಸ್ ಸಂಚಾರ

ಮನೆಯ ಬಾಗಿಲು ಹಾಕಿಕೊಂಡು ಬಾಲ್ಕನಿಯಿಂದ ನಿಂತು, ಅಲ್ಲಿಂದಾನೇ ಹಾರುವುದಕ್ಕೆ ಮುಂದಾಗಿದ್ದಾಳೆ. ಅಲ್ಲಿಯೇ ಇದ್ದ ಪೊಲೀಸರು ಕೊನೆಗೆ ಆಕೆಯ ಮನೆಯ ಬಾಗಿಲನ್ನ ಒಡೆದು ಆಕೆಗೆ ಏನೂ ಅಪಾಯ ಆಗದಂತೆ ನೋಡಿಕೊಂಡಿದ್ಧಾರೆ. ಈಗ ಆಕೆ ಸೇಫ್ ಆಗಿದ್ದಾಳೆ.

ಗಂಡನ ಜೊತೆ ಪ್ರತಿನಿತ್ಯ ಜಗಳ ಹಾಗೂ ಈಗ ಆತ ಮನೆ ಬಿಟ್ಟು ಹೋಗಿದ್ದು ಆಕೆಗೆ ಆಘಾತವಾಗಿದೆ. ಮಾನಸಿಕವಾಗಿ ನೊಂದಿರೋ ಆಕೆ ಆತ್ಮಹತ್ಯೆಗೆ ಮುಂದಾಗಿರೋದು ತಿಳಿದು ಬಂದಿದೆ. ಈಗ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಗ ನೋಯ್ಡಾ ಪೊಲೀಸ್, ಮನೆಬಿಟ್ಟು ಹೋಗಿರೋ ಪತಿರಾಯನನ್ನ ಹುಡುಕಿ ಗಂಡ-ಹೆಂಡತಿಯನ್ನ ಒಂದು ಮಾಡುವ ಪ್ರಯತ್ನದಲ್ಲಿದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...