ಸ್ವಿಗ್ಗಿಯಿಂದ ಕಾಫಿ ಆರ್ಡರ್ ಮಾಡಿದ ಬೆಂಗಳೂರಿನ ವ್ಯಕ್ತಿ; ಡೆಲಿವರಿ ಬಾಯ್ ಮಾಡಿದ್ದೇನು ಗೊತ್ತಾ…..? 06-05-2022 8:25AM IST / No Comments / Posted In: Karnataka, Latest News, Live News ಬೆಂಗಳೂರು ದೇಶದ ಟೆಕ್ ಹಬ್ ಆಗಿರಬಹುದು. ಆದರೆ, ಈ ನಗರವು ವಿಚಿತ್ರ ಘಟನೆಗಳು ಮತ್ತು ಸನ್ನಿವೇಶಗಳ ಚಿನ್ನದ ಗಣಿ ಎಂದು ನಿಮಗೆ ತಿಳಿದಿದೆಯೇ ? ಕೆಲವು ದಿನಗಳ ಹಿಂದೆ, ಯುವಕನೊಬ್ಬ ಮಾಡಿದ್ದ ಚಾಟ್ ವಿವರ ಟ್ವಿಟ್ಟರ್‌ನಲ್ಲಿ ವೈರಲ್ ಆಗಿತ್ತು. ಇದೀಗ, ಸ್ವಿಗ್ಗಿ ಫುಡ್ ಡೆಲಿವರಿ ಏಜೆಂಟ್‌ಗೆ ಸಂಬಂಧಿಸಿದ ಅಚ್ಚರಿಯ ಘಟನೆಯೊಂದು ವೈರಲ್ ಆಗಿದೆ. ಬೆಂಗಳೂರಿನ ವ್ಯಕ್ತಿಯೊಬ್ಬರು ಕಾಫಿಗಾಗಿ ಸಿಸಿಡಿ ಔಟ್‌ಲೆಟ್‌ನಲ್ಲಿ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದಾರೆ. ಓಂಕಾರ್ ಜೋಶಿ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಪೋಸ್ಟ್ ಕಥೆಯು ಹೇಗೆ ಕೊನೆಗೊಂಡಿತು ಎಂಬುದನ್ನು ತೋರಿಸುತ್ತದೆ. ಆರ್ಡರ್ ಅನ್ನು ದೃಢೀಕರಿಸಿದ ಮತ್ತು ಪ್ಯಾಕ್ ಮಾಡಿದ ನಂತರ, ಡೆಲಿವರಿ ಏಜೆಂಟ್ ಅದನ್ನು ಪಡೆದುಕೊಂಡಿದ್ದಾನೆ. ಆದರೆ, ಆತ ಸಮಯಕ್ಕೆ ಸರಿಯಾಗಿ ಬರಲು ತಡವಾಗಿದೆ. ಆದರೂ, ಡೆಲಿವರಿ ಏಜೆಂಟ್ ಡುನ್ಝು ಎಂಬ ಮತ್ತೊಂದು ಡೆಲಿವರಿ ಅಪ್ಲಿಕೇಶನ್‌ನಿಂದ ಇನ್ನೊಬ್ಬ ವ್ಯಕ್ತಿಯನ್ನು ಬುಕ್ ಮಾಡಿದ್ದು, ಆತನ ಮುಖಾಂತರ ಕಳುಹಿಸಿಕೊಟ್ಟಿದ್ದಾರೆ. ಬಳಿಕ ಗ್ರಾಹಕರಿಗೆ ಫೋನ್ ಮಾಡಿದ ಡೆಲಿವರಿ ಬಾಯ್ ತನಗೆ 5 ಸ್ಟಾರ್ ರೇಟಿಂಗ್ ನೀಡುವಂತೆ ಒತ್ತಾಯಿಸಿದರಂತೆ. ಈ ಕಥೆಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ವೇಗವಾಗಿ ವೈರಲ್ ಆಗಿದೆ. ಘಟನೆಯ ಅಸಾಮಾನ್ಯ ತಿರುವು ನೋಡಿ ನೆಟ್ಟಿಗರು ನಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಕೆಲವರು ವಿತರಣಾ ಏಜೆಂಟ್ ನಿರ್ವಹಿಸಿದ ವಿಧಾನವನ್ನು ಶ್ಲಾಘಿಸಿದರೆ, ಇತರರು ಬೆಂಗಳೂರಿನ ಟ್ರಾಫಿಕ್ ಬಿಸಿ ಇದಕ್ಕೆ ಕಾರಣ ಅಂತಾ ಬಣ್ಣಿಸಿದ್ದಾರೆ. Hello @peakbengaluru, the latest Bangalore update is broken. pic.twitter.com/GlDRJgdreh — Omkar Joshi (@omkar__joshi) May 4, 2022