ನೆಟ್ಟಿಗರನ್ನು ಗೊಂದಲಕ್ಕೆ ದೂಡಿರುವ ಈ ವಿಡಿಯೋ ಹಿಂದಿನ ಅಸಲಿಯತ್ತೇ ಬೇರೆ…! 06-05-2022 8:50AM IST / No Comments / Posted In: Latest News, Live News, International ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ವಿಲಕ್ಷಣ ಕಾರಣಕ್ಕಾಗಿ ಅಂತರ್ಜಾಲದ ಗಮನ ಸೆಳೆದಿದೆ. ವೈರಲ್ ವಿಡಿಯೋವನ್ನು ವೀಕ್ಷಿಸಿದ್ರೆ ಅಕ್ಷರಶಃ ನೀವು ಗೊಂದಲಕ್ಕೊಳಗಾಗಬಹುದು. ಡೈನೋಸಾರ್‌ಗಳ ಸಂತತಿ ನಿರ್ನಾಮವಾಗಿವೆ. ಹಾಗಾದ್ರೆ ಈ ವಿಡಿಯೋದಲ್ಲಿರುವ ಜೀವಿಗಳು ಯಾವುದು ಅಂತಾ ಪ್ರಶ್ನೆ ಮೂಡಿದೆ. ಹೌದು, ನೀವು ಈ ವಿಡಿಯೋವನ್ನು ವೀಕ್ಷಿಸಲು ಬಯಸಿದರೆ, ಅದರಲ್ಲಿರುವ ಜೀವಿಗಳು ಮೊದಲ ನೋಟಕ್ಕೆ ಡೈನೋಸಾರ್‌ಗಳಂತೆ ಕಾಣಿಸಬಹುದು. ಆದರೆ, ನೀವು ಸೂಕ್ಷ್ಮವಾಗಿ ಗಮನಿಸಿದರೆ, ಇವುಗಳು ಕೋಟಿಸ್ ಪ್ರಾಣಿಗಳು ಎಂದು ನೀವು ತಿಳಿದುಕೊಳ್ಳುತ್ತೀರಿ. ಅಂದರೆ ವಿಡಿಯೋದಲ್ಲಿ ಪ್ರಾಣಿಗಳನ್ನು ಚಲನೆಯನ್ನು ಹಿಮ್ಮುಖವಾಗಿರುವಂತೆ ಎಡಿಟ್ ಮಾಡಲಾಗಿದೆ. ಇದನ್ನು ಟ್ವಿಟ್ಟರ್ ನ ಬ್ಯುಟೆಂಗೆಬೀಡೆನ್‌ನಲ್ಲಿ ಹಂಚಿಕೊಳ್ಳಲಾಗಿದ್ದು, 2 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ. ವೈರಲ್ ವಿಡಿಯೋದಲ್ಲಿ, ಡೈನೋಸಾರ್‌ಗಳ ಗುಂಪು ಓಡುತ್ತಿರುವಂತೆ ಭಾಸವಾಗುತ್ತದೆ. ಇದು ಹಿಮ್ಮುಖವಾಗಿ ಓಡಿದ ಕೋಟಿಸ್ ಪ್ರಾಣಿಗಳ ಗುಂಪಿನ ವಿಡಿಯೋವಾಗಿದೆ. ವಿಡಿಯೋ ಬಹುಮಟ್ಟಿಗೆ ಎಲ್ಲರನ್ನೂ ಗೊಂದಲಕ್ಕೆ ದೂಡಿದೆ. ಮೊದಲಿಗೆ ತಾನು ಹತ್ತಿರದಿಂದ ನೋಡುವವರೆಗೂ ಅವು ಚಿಕ್ಕ ಡೈನೋಸಾರ್‌ಗಳು ಎಂದು ಭಾವಿಸಿದೆ. ಅವುಗಳು ತಮ್ಮ ಬಾಲಗಳನ್ನು ಮೇಲಕ್ಕೆತ್ತಿ ಹಿಂದಕ್ಕೆ ನಡೆಯುತ್ತಿರುವುದು ಕಂಡುಬಂದಿದೆ ಎಂದು ಬಳಕೆದಾರರು ಬರೆದಿದ್ದಾರೆ. ಕೋಟಿಸ್‌ಗಳು ಸಾಮಾನ್ಯವಾಗಿ ದಕ್ಷಿಣ ಅಮೆರಿಕಾ, ಮಧ್ಯ ಅಮೆರಿಕಾ, ಮೆಕ್ಸಿಕೋ ಮತ್ತು ನೈಋತ್ಯ ಯುನೈಟೆಡ್ ಸ್ಟೇಟ್ಸ್‌ಗೆ ಸ್ಥಳೀಯ ಸಸ್ತನಿಗಳಾಗಿವೆ. https://twitter.com/buitengebieden/status/1521943849656016897?ref_src=twsrc%5Etfw%7Ctwcamp%5Etweetembed%7Ctwterm%5E1521943849656016897%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdinosaurs-are-extinct-so-what-are-these-creatures-in-this-viral-video-1945807-2022-05-05 So, if you put a video with coati, or coatimundi, in reverse, you are in Jurassic Park. Who made this?!?! 🦕 pic.twitter.com/cEgUEpCNwl — DAPPER DON DHARSHI • K A M I L • (@SoloFlow786) May 4, 2022