ಕೆಲವೊಮ್ಮೆ ಕಣ್ಣುಗಳು ವಾಸ್ತವಕ್ಕೆ ಹತ್ತಿರವಿಲ್ಲದ ವಿಷಯಗಳನ್ನು ಗ್ರಹಿಸಲು ಮನಸ್ಸನ್ನು ಮೋಸಗೊಳಿಸಬಹುದು. ಕೆಲವೊಮ್ಮೆ ಪರಿಸ್ಥಿತಿಗಳು ಮನಸ್ಸನ್ನು ತಳಮಳಗೊಳಿಸುವ ಭ್ರಮೆಯಾಗುತ್ತವೆ. ಇತ್ತೀಚೆಗೆ ಆಪ್ಟಿಕಲ್ ಇಲ್ಯೂಷನ್ ನಂತಹ ಚಿತ್ರಗಳು ನೆಟ್ಟಿಗರನ್ನು ಹೆಚ್ಚು ಗೊಂದಲಗೊಳಿಸುತ್ತದೆ.
ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ, ಸುರಂಗದ ಪ್ರವೇಶವನ್ನು ತೋರಿಸಲಾಗಿದೆ. ಜೊತೆಗೆ ಸುರಂಗದ ಬೆಂಡ್, ಪ್ರವೇಶದಿಂದ ಸುಮಾರು 200 ಮೀಟರ್ ದೂರದಲ್ಲಿದೆ. ಎಡಭಾಗದಲ್ಲಿ ಬೆಂಡ್ ಗೋಚರಿಸಲು ಪ್ರಾರಂಭಿಸಿದಾಗ, ಅದು ಆಳವಾದ ಹೊಂಡ ಎಂದು ತೋರುತ್ತದೆ.
ವಿಡಿಯೋವನ್ನು ಚಿತ್ರೀಕರಿಸಿದ ವ್ಯಕ್ತಿಯು ಯಾವುದೇ ಗಡಿಗಳಿಲ್ಲದ ಹಳ್ಳದ ಕಡೆಗೆ ಗಮನವನ್ನು ಸೆಳೆಯುವ ಮೂಲಕ ಹಾದುಹೋಗುವ ಜನರನ್ನು ಎಚ್ಚರಿಸುತ್ತಾನೆ. ಇಲ್ಲಿ ಒಂದು ಕಾರು, ಹಳ್ಳವನ್ನು ಗಮನಿಸಿ ಒಂದು ಕ್ಷಣ ನಿಲ್ಲಿಸುತ್ತದೆ. ಹಾಗೂ ನಂತರ ಅದನ್ನು ಎಚ್ಚರಿಕೆಯಿಂದ ದಾಟುತ್ತದೆ. ಅದನ್ನು ಹಿಂಬಾಲಿಸುವ ಮತ್ತೊಂದು ಕಾರು ಹಳ್ಳದೊಳಗೆ ವೇಗವಾಗಿ ಹೋಗುತ್ತಿರುವಂತೆ ತೋರುತ್ತಿದೆ. ಗುಂಡಿಯನ್ನು ಅಂಚಿನಲ್ಲಿ ಸಾಗಿದಾಗ ನೀರು ಚಿಮ್ಮುತ್ತದೆ.
ಹೌದು, ಈ ಗುಂಡಿಯು ವಾಸ್ತವವಾಗಿ ನೀರಿನ ಕೊಚ್ಚೆಗುಂಡಿಯಾಗಿದ್ದು, ಅದು ಸುರಂಗದ ಮೇಲ್ಛಾವಣಿಯನ್ನು ಪ್ರತಿಬಿಂಬಿಸುತ್ತದೆ. ಸ್ಪಷ್ಟವಾದ ಪ್ರತಿಬಿಂಬದಿಂದಾಗಿ, ಅದು ಸುರಂಗದಲ್ಲಿ ಆಳವಾದ ಹೊಂಡದಂತೆ ತೋರುತ್ತಿತ್ತು. ವಿಡಿಯೋವನ್ನು ಚಿತ್ರೀಕರಿಸಿದ ಚಾಲಕ ಕೂಡ ತನ್ನ ಮನಸ್ಸು ಎಷ್ಟು ಸುಲಭವಾಗಿ ಮತ್ತು ಎಷ್ಟರ ಮಟ್ಟಿಗೆ ಭ್ರಮೆಯಿಂದ ಮೋಸಗೊಂಡಿತು ಎಂದು ಆಶ್ಚರ್ಯಚಕಿತನಾಗಿದ್ದಾನೆ.
ಈ ವಿಡಿಯೋ ಸುಮಾರು 1.8 ಕೋಟಿ ವೀಕ್ಷಣೆಗಳನ್ನು ಗಳಿಸಿದೆ ಮತ್ತು ಸರಿಸುಮಾರು 15 ಲಕ್ಷ ಲೈಕ್ಗಳನ್ನು ಗಳಿಸಿದೆ. ನೆಟ್ಟಿಗರು ಕೂಡ ವಿಡಿಯೋ ನೋಡಿ ಅಚ್ಚರಿಗೊಂಡಿದ್ದಾರೆ.