ಧ್ವನಿವರ್ಧಕಗಳ ಬಗ್ಗೆ ಶಿವಸೇನಾ ಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಅವರು ಮಾಡಿದ ಭಾಷಣದ ಹಳೆಯ ವಿಡಿಯೋ ತುಣುಕನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆ, ಮಸೀದಿಗಳ ಹೊರಗಡೆ ಹನುಮಾನ್ ಚಾಲೀಸವನ್ನು ಪಠಣ ಮಾಡುವಂತೆ ಜನತೆಗೆ ಕರೆ ನೀಡಿದ್ದಾರೆ.
ಹಿಂದುತ್ವದ ನಾಯಕರೆನಿಸಿಕೊಂಡಿದ್ದ ಬಾಳಾ ಠಾಕ್ರೆ ಅವರು ರಸ್ತೆಗಳಲ್ಲಿ ನಮಾಜ್ ಮಾಡುವುದು ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಿರುವ ಬಗ್ಗೆ ಮಾತನಾಡಿದ್ದ ವಿಡಿಯೋ ಇದಾಗಿದೆ.
ತುರ್ತು ಸಹಾಯವಾಣಿಗೆ ಕರೆ ಮಾಡಿ 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟ ಭೂಪ…!
ಈ ಮಧ್ಯೆ, ಬಾಳಾ ಠಾಕ್ರೆ ಮತ್ತು ವೀರ್ ಸಾವರ್ಕರ್ ಅವರು ದೇಶಕ್ಕೆ ಹಿಂದುತ್ವದ ಪಾಠವನ್ನು ಹೇಳಿಕೊಟ್ಟವರು ಮತ್ತು ಶಿವಸೇನಾದ ಶಾಲೆಯೇ ಹಿಂದುತ್ವದ ಮೂಲವಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಚಿಕ್ಕಪ್ಪ ಬಾಳಾ ಠಾಕ್ರೆಯವರ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ರಾಜ್ ಠಾಕ್ರೆಯವರು ರಾಜಕೀಯ ಲಾಭ ಪಡೆಯುವತ್ತ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರದಲ್ಲಿ ಹನುಮಾನ್ ಚಾಲೀಸ ಪಠಣ- ಧ್ವನಿವರ್ಧಕದ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ವಾದ-ವಿವಾದಗಳು ನಡೆಯುತ್ತಿವೆ. ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸ್ ಪಠಣ ಮಾಡುವ ಯೋಜನೆಯನ್ನು ರೂಪಿಸಿದ್ದ ಆರೋಪದಲ್ಲಿ ಪಕ್ಷೇತರ ರಾಜಕಾರಣಿಗಳಾದ ನವನೀತ್ ರಾಣಾ ಮತ್ತು ರವಿ ರಾಣಾ ಆವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.