ನಿಮ್ಮ ಕಣ್ಣಂಚನ್ನು ತೇವಗೊಳಿಸುತ್ತೆ ಮಗನೊಂದಿಗೆ ಯೋಧ ಭೇಟಿಯಾದ ಭಾವುಕ ಕ್ಷಣದ ವಿಡಿಯೋ 04-05-2022 10:52AM IST / No Comments / Posted In: Latest News, Live News, International ಸೈನಿಕರ ಮಕ್ಕಳು ಮತ್ತು ಹೆಂಡತಿಯರ (ಕುಟುಂಬ) ಜೀವನ ಬಹಳ ಕಷ್ಟಕರವಾಗಿರುತ್ತದೆ. ಅವರ ಕುಟುಂಬದ ಸದಸ್ಯರ ಬಗ್ಗೆ ಯಾವಾಗಲೂ ಅನಿಶ್ಚಿತತೆ ಮತ್ತು ಅವರನ್ನು ಮತ್ತೆ ಭೇಟಿ ಮಾಡುವ ಅನುಮಾನ ಇರುತ್ತದೆ. ಇದೀಗ, ತನ್ನ ಸೈನಿಕ ತಂದೆಯನ್ನು ನೋಡಿದ ಮಗು ನೀಡಿದ ಪ್ರತಿಕ್ರಿಯೆಯ ವಿಡಿಯೋ ವೈರಲ್ ಆಗಿದೆ. ಇದು ನೆಟ್ಟಿಗರ ಹೃದಯ ಕರಗಿಸಿದೆ. ಕರ್ತವ್ಯದಿಂದ ಹಿಂತಿರುಗಿದ ಸೈನಿಕ ತಂದೆ, ತನ್ನ ಮಗನನ್ನು ಆಶ್ಚರ್ಯಗೊಳಿಸಿದ್ದಾರೆ. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಾಲಕ ಬಾಕ್ಸಿಂಗ್ ಅಭ್ಯಾಸ ಮಾಡುತ್ತಿದ್ದ. ಈ ವೇಳೆ ಎಂಟ್ರಿ ಕೊಟ್ಟ ತಂದೆ, ಮಗನ ಜೊತೆಗೆ ಬಾಕ್ಸಿಂಗ್ ಕಿಕ್ ಕೊಟ್ಟಿದ್ದಾರೆ. ಅವನು ತನ್ನ ತರಬೇತುದಾರ ಎಂದು ಭಾವಿಸಿ ಕಿಕ್‌ಬಾಕ್ಸಿಂಗ್ ಪ್ರಾರಂಭಿಸುತ್ತಾನೆ. ಬಹುಶಃ ಆತನಿಗೆ ಧ್ವನಿ ಕೇಳಿ ಏನೋ ವಿಚಿತ್ರವಾಗಿ ಎಂದೆನಿಸಿತು ಎಂದು ತೋರುತ್ತದೆ. ಕೂಡಲೇ ತನ್ನ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿದ್ದಾನೆ. ತನ್ನ ತಂದೆಯನ್ನು ನೋಡುತ್ತಿದ್ದಂತೆ ಅವರನ್ನು ತಬ್ಬಿ ಜೋರಾಗಿ ಅತ್ತಿದ್ದಾನೆ. ಈ ಭಾವುಕ ವಿಡಿಯೋವನ್ನು ಮೊದಲಿಗೆ ನ್ಯೂಸ್ 4 ನ್ಯಾಶ್ವಿಲ್ಲೆ ಹಂಚಿಕೊಂಡಿದೆ. ಅಪ್‌ಲೋಡ್ ಮಾಡಿದ ನಂತರ, ವಿಡಿಯೋ 10.5 ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ. ತಂದೆ-ಮಗನ ಭಾವುಕ ಕ್ಷಣದ ವಿಡಿಯೋವನ್ನು ನೋಡಿದ ನೆಟ್ಟಿಗರು ಕೂಡ ಕಂಬನಿ ಬೀರಿದ್ದಾರೆ. फ़ौजी पिता ने जब ड्यूटी से लौट कर बेटे को सरप्राइज़ दिया 😍 pic.twitter.com/XVJArFtsmS — Umashankar Singh उमाशंकर सिंह (@umashankarsingh) May 1, 2022