ಹೂಡಿಕೆ ಮಾಡುವುದು ಒಳ್ಳೆಯ ಅಭ್ಯಾಸ. ತುರ್ತು ಪರಿಸ್ಥಿತಿಯಲ್ಲಿ ಈ ಹಣ ಸಹಾಯಕ್ಕೆ ಬರುತ್ತದೆ. ಆದ್ರೆ ಅನೇಕರಿಗೆ ಎಲ್ಲಿ ಹಣ ಹೂಡಿಕೆ ಮಾಡಬೇಕು ಹಾಗೆ ಎಲ್ಲಿ ಹೂಡಿಕೆ ಮಾಡಿದ್ರೆ ಹೆಚ್ಚಿನ ಲಾಭ ಸಿಗುತ್ತೆ ಎಂಬುದು ಗೊತ್ತಿರುವುದಿಲ್ಲ. ಸುರಕ್ಷಿತ ಹೂಡಿಕೆಗೆ ಅಂಚೆ ಕಚೇರಿ ಉತ್ತಮ. ಅಂಚೆ ಕಚೇರಿಯ ʼಕಿಸಾನ್ ವಿಕಾಸ್ ಪತ್ರʼ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಡಬಲ್ ಹಣ ವಾಪಸ್ ಪಡೆಯಬಹುದು.
ಕಿಸಾನ್ ವಿಕಾಸ್ ಪತ್ರವು ಭಾರತ ಸರ್ಕಾರದ ಒಂದು ಹೂಡಿಕೆ ಯೋಜನೆಯಾಗಿದೆ. ಇಲ್ಲಿ ಹಣವು ಒಂದು ನಿರ್ದಿಷ್ಟ ಅವಧಿಯಲ್ಲಿ ದ್ವಿಗುಣಗೊಳ್ಳುತ್ತದೆ. ಕಿಸಾನ್ ವಿಕಾಸ್ ಪತ್ರ ದೇಶದ ಎಲ್ಲಾ ಅಂಚೆ ಕಚೇರಿಗಳು ಮತ್ತು ದೊಡ್ಡ ಬ್ಯಾಂಕುಗಳಲ್ಲಿ ಲಭ್ಯವಿದೆ. ಇದರ ಮುಕ್ತಾಯ ಅವಧಿ 124 ತಿಂಗಳುಗಳು. ಇದರಲ್ಲಿ ಕನಿಷ್ಠ ಹೂಡಿಕೆ 1000 ರೂಪಾಯಿ. ಗರಿಷ್ಠ ಹೂಡಿಕೆಗೆ ಮಿತಿಯಿಲ್ಲ. ನಿರ್ದಿಷ್ಟ ರೈತರಿಗಾಗಿ ಈ ಯೋಜನೆಯನ್ನು ಶುರುಮಾಡಲಾಗಿದೆ.
ಕಿಸಾನ್ ವಿಕಾಸ್ ಪತ್ರದಲ್ಲಿ ಹೂಡಿಕೆ ಮಾಡಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಜಂಟಿ ಖಾತೆಯ ಸೌಲಭ್ಯವೂ ಲಭ್ಯವಿದೆ. ಕಿಸಾನ್ ವಿಕಾಸ್ ಪತ್ರದ ಹೂಡಿಕೆಯಲ್ಲಿ 1000 ರೂಪಾಯಿ 5000, 10,000 ರೂಪಾಯಿ ಮತ್ತು 50,000 ರೂಪಾಯಿವರೆಗೆ ಪ್ರಮಾಣ ಪತ್ರಗಳಿವೆ. ನಿಮಗೆ ಬೇಕಾದದ್ದನ್ನು ಖರೀದಿಸಬಹುದು.
ಕೆವಿಪಿ ಬಡ್ಡಿ ದರವನ್ನು 2021 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 6.9 ಕ್ಕೆ ನಿಗದಿಪಡಿಸಲಾಗಿದೆ. ಹೂಡಿಕೆ 124 ತಿಂಗಳಲ್ಲಿ ದ್ವಿಗುಣಗೊಳ್ಳುತ್ತದೆ. 1 ಲಕ್ಷ ರೂಪಾಯಿಗಳನ್ನು ಸಂಪೂರ್ಣವಾಗಿ ಹೂಡಿಕೆ ಮಾಡಿದರೆ, ಮುಕ್ತಾಯದ ನಂತರ ನಿಮಗೆ 2 ಲಕ್ಷ ರೂಪಾಯಿ ಸಿಗುತ್ತದೆ.
ಈ ಯೋಜನೆ ಆದಾಯ ತೆರಿಗೆ ಕಾಯ್ದೆ 80 ಸಿ ಅಡಿಯಲ್ಲಿ ಬರುವುದಿಲ್ಲ. ಕೆವಿಪಿಯನ್ನು ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದು. ಕಿಸಾನ್ ವಿಕಾಸ್ ಪತ್ರವನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ವರ್ಗಾಯಿಸಬಹುದು. ಕೆವಿಪಿಯಲ್ಲಿ ನಾಮನಿರ್ದೇಶನ ಸೌಲಭ್ಯ ಲಭ್ಯವಿದೆ.