ದೇವಿ ಲಕ್ಷ್ಮಿಯನ್ನು ಪ್ರಸನ್ನಗೊಳಿಸಲು ಜನರು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಆದ್ರೆ ನಾವು ತಿಳಿಯದೇ ಮಾಡುವ ಕೆಲವೊಂದು ತಪ್ಪುಗಳು ಲಕ್ಷ್ಮಿ ಬೇಸರಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಹಸಿವು, ಬಡತನ ಕಾಡಲು ಶುರುವಾಗುತ್ತದೆ.
ಜೀವನದಲ್ಲಿ ಸುಖ-ಶಾಂತಿ ಪಡೆಯಲು ಮನೆಯಲ್ಲಿ ಅನೇಕ ಪೂಜೆ, ವೃತ, ದೇವಸ್ಥಾನಕ್ಕೆ ಹೋಗ್ತಾರೆ. ಆದ್ರೆ ಮನೆಯಲ್ಲಿರುವ ಲಕ್ಷ್ಮಿಯನ್ನು ಗೌರವಿಸುವುದಿಲ್ಲ. ಮನೆಯಲ್ಲಿರುವ ಲಕ್ಷ್ಮಿಯನ್ನು ಅಪಮಾನ ಮಾಡುವ ಸದಸ್ಯರಿಗೆ ಲಕ್ಷ್ಮಿ ಒಲಿಯುವುದಿಲ್ಲ. ಸದಾ ಮನೆಯಲ್ಲಿ ಆರ್ಥಿಕ ವೃದ್ಧಿ, ಸಮೃದ್ಧಿ ಇರಬೇಕೆಂದಲ್ಲಿ ಮಹಿಳೆಗೆ ಅಗೌರವ ತೋರಿಸಬಾರದು.
ಮಹಿಳೆ ಮನೆಯಲ್ಲಿ ಸುಖ-ಶಾಂತಿಯಿಂದ ಜೀವನ ನಡೆಸುತ್ತಿದ್ದರೆ ಆ ಮನೆಯಲ್ಲಿ ಸದಾ ಸಂತೋಷ, ನೆಮ್ಮದಿ ನೆಲೆಸಿರುತ್ತದೆ.
BIG NEWS: ಎಲ್ಲಾ ಸಭೆಗಳನ್ನು ರದ್ದುಗೊಳಿಸಿ ತೆರಳಿದ ಅಮಿತ್ ಶಾ; ಬಿಜೆಪಿ ಚಾಣಾಕ್ಷ್ಯನ ನಡೆ ನಿಗೂಢ
ಅಡುಗೆ ಮನೆಯಲ್ಲಿ ಮಹಿಳೆ ಹೆಚ್ಚು ಸಮಯ ಕಳೆಯುತ್ತಾಳೆ. ಅಡುಗೆ ಮಾಡುವ ವೇಳೆ ಚಪ್ಪಲಿ, ಬೂಟ್ ಹಾಕಿಕೊಳ್ಳಬಾರದು. ಮನೆಯ ಸ್ವಚ್ಛತೆ ಕೂಡ ಅಷ್ಟೇ ಮುಖ್ಯ. ಅಡುಗೆ ಮನೆಯಲ್ಲಿ ಅನ್ನಪೂರ್ಣೆ ನೆಲೆಸಿರುತ್ತಾಳೆ. ಹಾಗಾಗಿ ಅಡುಗೆ ಮನೆ ಸದಾ ಸ್ವಚ್ಛವಾಗಿರಬೇಕು. ರಾತ್ರಿ ಮಲಗುವ ವೇಳೆ ಅಡುಗೆ ಮನೆಯನ್ನು ಸ್ವಚ್ಛಗೊಳಿಸಿ, ಪಾತ್ರೆಗಳನ್ನು ತೊಳೆದಿಡಬೇಕು.
ಭಾನುವಾರ ಮಹಿಳೆ, ಪುರುಷರು ದೂರವಿರಬೇಕು. ಪರಸ್ಪರ ಸ್ಪರ್ಶಿಸಬಾರದು. ಹೀಗೆ ಮಾಡಿದಲ್ಲಿ ಹಣದ ಕೊರತೆ ಎದುರಾಗುತ್ತದೆ.