ವಿಶ್ವದ ಅತಿ ದೊಡ್ಡ ವಿಸ್ಕಿ ಬಾಟಲಿ ಈಗ ಹರಾಜಿಗೆ ಸಿದ್ಧವಾಗಿದೆ. ಮಕಲನ್ ಬ್ರಾಂಡ್ ನ ಈ ವಿಸ್ಕಿ 32 ವರ್ಷ ಹಳೆಯದು. 311 ಲೀಟರ್ ಸ್ಕಾಚ್ ವಿಸ್ಕಿಯ ಈ ಬಾಟಲಿಯನ್ನು ಇದೇ ತಿಂಗಳು 25ರಂದು ಹರಾಜು ಹಾಕಲಾಗ್ತಿದೆ. ಈ ವಿಸ್ಕಿ ಬಾಟಲಿಯ ಹೆಸರು ದಿ ಇಂಟ್ರೆಪಿಡ್, 5 ಅಡಿ 11 ಇಂಚು ಎತ್ತರವಾಗಿದೆ ಈ ಬಾಟಲಿ.
ಎಡಿನ್ಬರ್ಗ್ ಮೂಲದ ಹರಾಜು ಸಂಸ್ಥೆ ಲಿಯಾನ್ ಮತ್ತು ಟರ್ನ್ಬುಲ್ ಇದನ್ನು ಹರಾಜು ಹಾಕ್ತಾ ಇವೆ. ಇದರಲ್ಲಿರೋ ವಿಸ್ಕಿಯ ಪ್ರಮಾಣ 444 ಸ್ಟ್ಯಾಂಡರ್ಡ್ ಬಾಟಲಿಗಳಿಗೆ ಸಮನಾಗಿದೆ. ಇದು ಜಗತ್ತಿನ ಅತ್ಯಂತ ದುಬಾರಿ ವಿಸ್ಕಿ ಬಾಟಲಿ ಎನಿಸಿಕೊಳ್ಳುವ ಸಾಧ್ಯತೆ ಇದೆ. ಈ ಹಿಂದಿನ ದಾಖಲೆ 1.9 ಮಿಲಿಯನ್ ಡಾಲರ್ ಇದೆ. ಈ ವಿಸ್ಕಿ ಬಾಟಲಿ ಇದನ್ನೂ ಮೀರಿಸಿದರೆ ಅದರ ಬೆಲೆ ನಾಲ್ಕು ಐಷಾರಾಮಿ ಲ್ಯಾಂಬೋರ್ಗಿನಿ ಕಾರುಗಳಿಗಿಂತಲೂ ಹೆಚ್ಚಾಗಲಿದೆ.
ಕಳೆದ ವರ್ಷವೇ ವಿಸ್ಕಿಯನ್ನು ಬಾಟಲಿಗೆ ತುಂಬಿಸಲಾಗಿದೆ. ವಿಸ್ಕಿ ಬಾಟಲಿ ದಾಖಲೆ ಮೊತ್ತಕ್ಕೆ ಮಾರಾಟವಾದರೆ ಅದರಲ್ಲಿ ಶೇ.25ರಷ್ಟು ಮೊತ್ತವನ್ನು ಮೇರಿ ಕ್ಯೂರಿ ಚಾರಿಟಿಗೆ ದಾನ ಮಾಡಲಾಗುವುದು ಎಂದು ಹರಾಜುದಾರರು ಹೇಳಿದ್ದಾರೆ. ಈ ಹರಾಜಿನ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಕುತೂಹಲವಿದೆ ಎನ್ನಲಾಗ್ತಿದೆ.
ಬಿಡ್ದಾರರು ಸ್ಕಾಚ್ ವಿಸ್ಕಿಯನ್ನು ಖರೀದಿಸುವ ಮೂಲಕ ಇತಿಹಾಸವನ್ನು ನಿರ್ಮಿಸುವ ಅವಕಾಶ ಹೊಂದಿದ್ದಾರೆ. ವಿಶ್ವದ ಅತ್ಯುತ್ತಮ ಡಿಸ್ಟಿಲರಿ ‘ದಿ ಮಕಲನ್’ ಮತ್ತು 32 ವರ್ಷ ವಯಸ್ಸಿನ ಸಿಂಗಲ್-ಮಾಲ್ಟ್ ಸ್ಕಾಚ್ನ ಮಾಲೀಕರಾಗುತ್ತಾರೆ.
ಈ ವಿಸ್ಕಿಯನ್ನು ಎರಡು ಪೀಪಾಯಿಗಳಲ್ಲಿ 32 ವರ್ಷಗಳ ಕಾಲ ಮ್ಯಾಕಲನ್ನ ಸ್ಪೈಸೈಡ್ ಗೋದಾಮಿನಲ್ಲಿ ಸಂಗ್ರಹಿಸಲಾಗಿತ್ತು. ಕಳೆದ ವರ್ಷ ಇದನ್ನು ಬೃಹತ್ ಗಾತ್ರದ ಬಾಟಲಿಗೆ ತುಂಬಿಸಲಾಗಿದೆ. ವಿಸ್ಕಿ ಮೃದುವಾದ ವಿನ್ಯಾಸವನ್ನು ಹೊಂದಿದೆ. ಉದ್ದವಾದ ಮತ್ತು ಬೆಚ್ಚಗಿನ ಮುಚ್ಚಳ ಹಾಕಿದ್ದು, ರುಚಿ ಕೂಡ ಅದ್ಭುತವಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.