ಮಕ್ಕಳು ದಿನವಿಡೀ ಓದುವಂತೆ ಒತ್ತಾಯಿಸುತ್ತಿರುವ ಹೆತ್ತವರು ಇರುವ ಈ ಜಗತ್ತಿನಲ್ಲಿ, ಈ ದಂಪತಿ ನಿಜಕ್ಕೂ ಸ್ಫೂರ್ತಿಯಾಗಿದ್ದಾರೆ. 40ರ ಹರೆಯದ ಮೈಕ್ ಪೋಪ್ ಮತ್ತು ಅವರ ಪತ್ನಿ ಬ್ರೂಕ್ ಈ ರೂಢಿಗತ ಸಂಪ್ರದಾಯಗಳನ್ನು ಮುರಿಯುತ್ತಿದ್ದಾರೆ. ವಿಶ್ವ ಪರ್ಯಟನೆಯತ್ತ ತಮ್ಮ ಗಮನವನ್ನು ಹರಿಸಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ತಮ್ಮ ಮೂವರು ಮಕ್ಕಳಾದ ಮ್ಯಾಕ್ಸ್, ಮಿಲಾ ಮತ್ತು ಡೈಸಿ ಅವರೊಂದಿಗೆ 15ಕ್ಕೂ ಹೆಚ್ಚು ದೇಶಗಳನ್ನು ಸಂದರ್ಶಿಸಿದ್ದಾರೆ. ಅಷ್ಟಾಗಿಯೂ ತಮ್ಮ ಮಕ್ಕಳ ಶಿಕ್ಷಣದ ವಿಚಾರದಲ್ಲಿ ರಾಜಿ ಮಾಡಿಕೊಂಡಿಲ್ಲ. ಆಶ್ಚರ್ಯವಾಗುತ್ತಿದೆಯೇ ? ಇದೇ ಕಾರಣಕ್ಕಾಗಿ ಮೈಕ್ ಮತ್ತು ಬ್ರೂಕ್ ಅವರ ಕಥೆ ಜನಪ್ರಿಯವಾಗುತ್ತಿದೆ. ನಾವು ನೆಲೆಯೂರುವುದು ಎಷ್ಟು ಮುಖ್ಯವೋ, ಪ್ರವಾಸವೂ ಅಷ್ಟೇ ಮುಖ್ಯ ಎಂದು ಈ ದಂಪತಿ ಭಾವಿಸುತ್ತಾರೆ. ಅದಕ್ಕಾಗಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಟ್ರಾವೆಲ್ ಏಜೆಂಟ್ ಆಗಿ ತಮ್ಮ ಕೆಲಸಗಳನ್ನು ಕೆಲವು ವರ್ಷಗಳ ಹಿಂದೆಯೇ ತೊರೆದಿದ್ದು, ಈಗ ಪ್ರವಾಸ ಮಾಡುತ್ತಿದ್ದಾರೆ.
ಸದ್ಯ ಪ್ರವಾಸದ ಮಧ್ಯೆ ಅವರು ರಿಮೋಟ್ ಆನ್ಲೈನ್ ಮಾರ್ಕೆಟಿಂಗ್ ಕೆಲಸಗಳನ್ನು ಮಾಡುತ್ತಿದ್ದಾರೆ. ಈ ಮೂಲಕವೇ ಅವರು ಅದ್ದೂರಿ ಜೀವನಶೈಲಿಗೆ ಬೇಕಾದ ಹಣವನ್ನೂ ಸಂಪಾದಿಸುತ್ತಿದ್ದಾರೆ. ಒಟ್ಟು ಐವರು ಸದಸ್ಯರಿರುವ ಈ ಕುಟುಂಬದ ಮೂವರೂ ಮಕ್ಕಳು 10ಕ್ಕಿಂತ ಕಡಿಮೆ ವಯಸ್ಸಿನವರು.
ಆಸ್ಟ್ರೇಲಿಯಾದ ಮೆಲ್ಬೋರ್ನ್ ಮೂಲದ ಅವರು ಮಾಲ್ಟಾ, ಮೆಕ್ಸಿಕೋ, ಸರ್ಬಿಯಾ, ಬೋಸ್ಟನ್, ಫ್ಲಾರಿಡಾ, ಐಸ್ಲ್ಯಾಂಡ್, ಟರ್ಕಿ, ಇಂಗ್ಲಂಡ್ ಮತ್ತು ಆಸ್ಟ್ರೇಲಿಯಾದ ಹಲವು ಭಾಗಗಳನ್ನು ಕಳೆದ ಮೂರು ವರ್ಷಗಳಲ್ಲಿ ಸಂದರ್ಶಿಸಿದ್ದಾರೆ.
ಪ್ರವಾಸ ಮತ್ತು ಸಾಹಸ ಎಂದರೆ ಬ್ರೂಕ್ ಮತ್ತು ನನಗೆ ತುಂಬ ಇಷ್ಟ. ಮಕ್ಕಳನ್ನು ಹೊಂದುವುದಕ್ಕಿಂತ ಪೂರ್ವದಲ್ಲೂ ನಾವಿಬ್ಬರು ಹಲವು ತಾಣಗಳನ್ನು ವೀಕ್ಷಿಸಿದ್ದೇವೆ. ನಾವು ಫ್ಲಾರಿಡಾದ ಡಿಸ್ನಿ ವರ್ಲ್ಡ್ ಗೆ ಹೋಗಿದ್ದೇವೆ. ಮೆಕ್ಸಿಕೋದಲ್ಲಿ ಕೋವಿಡ್-19 ನಿರ್ಬಂಧಗಳಿಂದಾಗಿ 4 ತಿಂಗಳು ಸಿಕ್ಕಿ ಹಾಕಿಕೊಂಡಿದ್ದೆವು. ಪ್ರವಾಸದಲ್ಲೂ ಮಕ್ಕಳ ಶಿಕ್ಷಣವನ್ನು ನಾವು ನಿರ್ಲಕ್ಷಿಸಿಲ್ಲ. ಮನೆಯಲ್ಲಿ ಹಾಗೂ ಪ್ರವಾಸದಲ್ಲಿ ಅವರಿಗೆ ನಾವೇ ಎಲ್ಲ ಪಾಠಗಳನ್ನೂ ಹೇಳಿಕೊಡುತ್ತಿದ್ದೇವೆ. ಆನ್ಲೈನ್ ಪಾಠಗಳ ನೆರವನ್ನೂ ಪಡೆಯುತ್ತಿದ್ದೇವೆ ಎಂದು ಮೈಕ್ ತಿಳಿಸಿದ್ದಾರೆ.
ಸ್ಕೂಟರ್ ಖರೀದಿಗೆ 71 ಸಾವಿರ ರೂಪಾಯಿ…! ಅದರ ನಂಬರ್ ಗೆ ಖರ್ಚು ಮಾಡಿದ್ದು 15 ಲಕ್ಷ ರೂ.