ಕೊಪ್ಪಳ: ಸರ್ಕಾರದ ಅಧಿಸೂಚನೆಯಂತೆ ಇನಾಂ ಜಮೀನು ಮರು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಲು ದಿ:18-01-2023 ರವರೆಗೆ ಕಾಲವಧಿ ವಿಸ್ತರಿಸಲಾಗಿದೆ.
ಸರ್ಕಾರದ ಆದೇಶದನ್ವಯ ಇನಾಂ ಜಮೀನು ರಿ-ಗ್ರಾಂಟ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇನಾಂ ಜಮೀನು ರಿ-ಗ್ರಾಂಟ್‌ಗಾಗಿ ಅರ್ಜಿ ಸಲ್ಲಿಸದೇ ಉಳಿದಿರುವ ಹಾಗೂ ಪಹಣಿ ಕಾಲಂ-6 ರಲ್ಲಿ “ಇನಾಂ” ಹೊಂದಿರುವ ಎಲ್ಲಾ ಪಹಣಿಗಳನ್ನು ಸರ್ಕಾರದ ಅಧಿಸೂಚನೆಯಂತೆ ಇನಾಂ ರದ್ದಿಯಾಯಿತಿ ಕೋರಿ ಅರ್ಜಿ ಸಲ್ಲಿಸಲು ನಿರ್ದೇಶನ ನೀಡಿರುವುದರಿಂದ, ಮುಂದುವರೆದು ಫಾರಂ ನಂ-(1) ಧಾರ್ಮಿಕ ಸಂಸ್ಥೆಗೆ ಸೇರಿದ ಇನಾಂ ಹಾಗೂ ಫಾರಂ ನಂ: (1)(ಎ) ವೈಯಕ್ತಿಕ ಇನಾಂ, ವಿಲೇಜ್ ಸರ್ವಿಸ್ ಇನಾಂ, ವಾಲಿಕಾರ ಇನಾಂ, ಮಗಲಂ ಇನಾಂ ಹಕ್ಕುದಾರ ಅಥವಾ ಹಕ್ಕುದಾರರಲ್ಲದ ಇನಾಂ ಜಮೀನುಗಳಿಗೆ ಸಂಬಂಧಿಸಿದಂತೆ ಇನಾಂ ರದ್ದಿಯಾಯಿತಿ ಕೋರಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಈ ಹಿನ್ನೆಲೆಯಲ್ಲಿ ಕೊಪ್ಪಳ ತಾಲ್ಲೂಕಿಗೆ ಸಂಬಂಧಿಸಿದಂತೆ ಇನಾಂ ಜಮೀನಿನ ಸಾಗುವಳಿದಾರರು 2023ರ ಜನವರಿ 18 ರೊಳಗಾಗಿ ತಹಶೀಲ್ದಾರ ಕಾರ್ಯಾಲಯಕ್ಕೆ ಅಥವಾ ಸಂಬಂಧಿಸಿದ ನಾಡಕಚೇರಿಗಳಲ್ಲಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದಲ್ಲಿ ಕಚೇರಿ ಸಮಯದಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಕೊಪ್ಪಳ ತಹಶೀಲ್ದಾರ ಅಮರೇಶ ಬಿರಾದಾರ ತಿಳಿಸಿದ್ದಾರೆ.