ಗುಜರಾತ್ ಕಾಂಗ್ರೆಸ್ ಯುವ ನಾಯಕ, ಪಕ್ಷದ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಕಾಂಗ್ರೆಸ್ ನಿಂದ ದೂರವಾಗಲಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗಿದೆ.
ಗುಜರಾತ್ ಪಾಟಿದಾರ್ ಸಮುದಾಯದ ನಾಯಕ ಹಾರ್ದಿಕ್ ಟ್ವಿಟರ್ ಬಯೋದಿಂದ ಪಕ್ಷದ ಹೆಸರನ್ನು ತೆಗೆದುಹಾಕಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತೊಂದು ವಿಕೆಟ್ ಪತನವಾಗುವ ಸೂಚನೆ ಸಿಕ್ಕಿದೆ.
ಹಾರ್ದಿಕ್ ಪಟೇಲ್ ತಮ್ಮ ಟ್ವಿಟರ್ ಬಯೋದಿಂದ ಪಕ್ಷದ ಹೆಸರನ್ನು ತೆಗೆದುಹಾಕಿದ್ದಾರೆ. ಕಾಂಗ್ರೆಸ್ ವಿರುದ್ಧ ಪಟೇಲರ ನಿರಂತರ ವಾಗ್ದಾಳಿ ನಡುವೆಯೇ ಈ ಬೆಳವಣಿಗೆ ನಡೆದಿದೆ. ಅವರು ಪಕ್ಷ ತೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.