ಕೆಲವರಿಗೆ ಕಂಕಣ ಕೂಡಿ ಬಂದಿರುವುದಿಲ್ಲ. ಏನೇ ಮಾಡಿದ್ರೂ ಮದುವೆಯಾಗುವುದಿಲ್ಲ. ವಯಸ್ಸು ಹೆಚ್ಚಾಗ್ತಾ ಇದ್ದಂತೆ, ಮದುವೆ ಮುಂದೆ ಹೋಗುವುದರಿಂದ ಚಿಂತೆ ಜಾಸ್ತಿಯಾಗುತ್ತದೆ. ಆದ್ರೆ ಅಂತವರು ಚಿಂತೆ ಮಾಡುವುದು ಬೇಡ. ಅಕ್ಷಯ ತೃತೀಯದಂದು ಕೆಲವೊಂದು ನಿಯಮಗಳನ್ನು ಪಾಲಿಸಿದ್ರೆ ಮದುವೆ ಕಾರ್ಯ ಬೇಗ ನೆರವೇರುತ್ತದೆ.
ನಿಮ್ಮ ಶಕ್ತಿಗನುಸಾರವಾಗಿ ಬಡವರಿಗೆ ಬಾಳೆಹಣ್ಣು, ಮಾವಿನ ಹಣ್ಣು, ತೆಂಗಿನ ಕಾಯಿಯನ್ನು ದಾನ ಮಾಡಿ.
ಅಕ್ಷಯ ತೃತೀಯದಂದು ಹಳದಿ ಬಣ್ಣದ ರುಮಾಲನ್ನು ನಿಮ್ಮ ಜೊತೆಗಿಟ್ಟುಕೊಳ್ಳಿ.
ವಿಷ್ಣು ಮಂದಿರಕ್ಕೆ ಹೋಗಿ ಬೇಸನ್ ಲಾಡನ್ನು ಭಕ್ತರಿಗೆ ನೀಡಿ.
ಊಟದಲ್ಲಿ ಕೇಸರಿಯನ್ನು ಉಪಯೋಗಿಸಿ. ಇಲ್ಲ ಕೇಸರಿಯ ತಿಲಕವನ್ನಿಟ್ಟುಕೊಳ್ಳಿ.
ಹಳದಿ ಬಣ್ಣದ ವಸ್ತ್ರವನ್ನು ದಾನವಾಗಿ ಕೊಡಿ.
ಬೃಹಸ್ಪತಿ ದೇವಸ್ಥಾನಕ್ಕೆ ಹೋಗಿ ದೇವರಿಗೆ ಹಣ್ಣು, ಹೂವನ್ನು ಅರ್ಪಿಸಿ.
ಒಂದು ಕೆಜಿ ಹಳದಿ ದಾಲ್ ಜೊತೆ ಬಂಗಾರದ ಆಭರಣವನ್ನು ದಾನವಾಗಿ ನೀಡಿ. ಹುಡುಗನಾಗಿದ್ದರೆ ಬ್ರಾಹ್ಮಣನಿಗೆ, ಹುಡುಗಿಯಾಗಿದ್ದರೆ ಕನ್ಯೆಗೆ ಇದನ್ನು ದಾನ ಮಾಡಿ.