ಕಳೆದ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ 18 ಲಕ್ಷಕ್ಕೂ ಅಧಿಕ ವಾಟ್ಸಾಪ್ ಅಕೌಂಟ್ ಗಳನ್ನು ನಿಷೇಧಿಸಲಾಗಿದೆ. ಇತ್ತೀಚೆಗೆ ವಾಟ್ಸಾಪ್ ಕಂಪನಿ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಕಿಅಂಶವನ್ನು ನೀಡಲಾಗಿದೆ.
ಭಾರತದಲ್ಲಿ ಹೊಸ ಐಟಿ ಕಾಯ್ದೆ 2021 ರ ಅನುಸಾರ ವಾಟ್ಸಾಪ್ ಬಿಡುಗಡೆ ಮಾಡಿರುವ ತನ್ನ ವರದಿ ಪ್ರಕಾರ ಮಾರ್ಚ್ 1 ರಿಂದ ಮಾರ್ಚ್ 31 ರವರೆಗೆ ಇಷ್ಟೊಂದು ಪ್ರಮಾಣದ ವಾಟ್ಸಾಪ್ ಅಕೌಂಟ್ ಗಳನ್ನು ನಿಷೇಧಿಸಿರುವುದಾಗಿ ತಿಳಿಸಿದೆ. ಐಟಿ ಕಾಯ್ದೆಯನ್ನು ಉಲ್ಲಂಘನೆ ಮಾಡಿದ ಆರೋಪದಲ್ಲಿ ಫೆಬ್ರವರಿಯಲ್ಲಿ 10 ಲಕ್ಷದಷ್ಟು ಅಕೌಂಟ್ ಗಳನ್ನು ನಿಷೇಧಿಸಲಾಗಿತ್ತು.
ಹಾಡಹಗಲೇ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಹಿಳಾ ಅಧಿಕಾರಿಯ ರಂಪಾಟ…!
ವ್ಯಕ್ತಿಗಳು ಅಥವಾ ಸಂಘಟನೆಗಳ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ, ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವಂತಹ ಹಾಗೂ ಪ್ರಚೋದನೆ ನೀಡುವಂತಹ ಸಂದೇಶಗಳನ್ನು ಕಳುಹಿಸಿದ ಆರೋಪಗಳ ಮೇಲೆ ಐಟಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ವಾಟ್ಸಾಪ್ ಈ `ಕೆಟ್ಟ’ 18 ಲಕ್ಷಕ್ಕೂ ಅಧಿಕ ಅಕೌಂಟ್ ಗಳ ಮೇಲೆ ನಿಷೇಧ ಹೇರಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ. ಇಂತಹ ವಿಚಾರಗಳನ್ನು ವಾಟ್ಸಾಪ್ ಮೂಲಕ ಪ್ರಸಾರ ಮಾಡುತ್ತಿರುವುದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕಾಯ್ದೆಯನ್ನು ಜಾರಿಗೆ ತಂದಿತ್ತು.